Malenadu Mitra
ರಾಜ್ಯ ಶಿವಮೊಗ್ಗ

ದುಬೈ ಕನ್ನಡ ಸಂಘದಿಂದ 5 ಲಕ್ಷ ಮೌಲ್ಯದ ಮಾಸ್ಕ್, ಸ್ಟೀಮರ್ ವಿತರಣೆ

ಶಿವಮೊಗ್ಗ ,ಜೂ.೩: ಕನ್ನಡಿಗರು ದುಬೈ ಸಂಘಟನೆಯಿಂದ ಕೊರೊನ ಸಂಕಷ್ಟದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ5ಲಕ್ಷ ಮೌಲ್ಯದ ಫೇಸ್ ಮಾಸ್ಕ್, ಸ್ಟೀಮರ್ ಪರಿಕರಗಳನ್ನು ನೀಡಲಾಯಿತು. ಗುರುವಾರ ನಡೆದ ಸರಳ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು, ಶಿವಮೊಗ್ಗ ಎಂಜನಿಯರಿಂಗ್ ಕಾಲೇಜು ಸಮೀಪ ಸಾರ್ವಜನಿಕರಿಗೆ ಸಾಂಕೇತಿಕವಾಗಿ ವಿತರಿಸಿದರು.
ದೂರದ ದುಬೈನಲ್ಲಿ ಜೀವನ ಕಂಡುಕೊಂಡಿರುವ ಕನ್ನಡಿಗರು ತಾಯಿನಾಡಿನ ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವನೆಯಿಂದ ಈ ನೆರವು ನೀಡಿದ್ದಾರೆ. ಸಂಘಟನೆಯ ಅಧ್ಯಕ್ಷೆ ಉಮಾ ವಿದ್ಯಾಧರ್, ಮಾಜಿ ಅಧ್ಯಕ್ಷರಾದ ಸದನ್‌ದಾಸ್, ವೀರೇಂದ್ರಬಾಬು, ಮಲ್ಲಿಕಾರ್ಜುನ್ ಗೌಡ, ಉಪಾಧ್ಯಕರಾದ ವಿನೀತ್ ಕುಮಾರ್, ಸದಸ್ಯರಾದ ದೀಪಕ್‌ಕುಮಾರ್, ಅರುಣ್‌ಕುಮಾರ್, ವೆಂಕಟ್ ಕಾಮತ ಮತ್ತು ಶ್ರೀನಿವಾಸ್ ಅರಸ್ ಅವರು ಆರ್ಥಿಕ ನೆರವು ನೀಡಿದ್ದರು.
ಮಾಸ್ಕ್ ವಿತರಣೆ ಸಂದರ್ಭ ಪ್ರದೀಪ್ ಚಂದ್ರ, ರುದ್ರಪ್ರಸಾದ್ ಹಾಗೂ ಚಿದಾನಂದ ಮತ್ತಿತರರು ಇದ್ದರು.

Ad Widget

Related posts

ಬಂಗಾರಪ್ಪ ಸ್ಮರಣೆ ಕಾರ್ಯಕ್ರಮ

Malenadu Mirror Desk

ವರುಣನ ಕೃಪೆಗಾಗಿ ಪರ್ಜನ್ಯ ಜಪ

Malenadu Mirror Desk

ಪೊಲೀಸ್ ತುರ್ತು ಸೇವೆಗೆ ಡಯಲ್-112

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.