Malenadu Mitra
ಭಧ್ರಾವತಿ ರಾಜ್ಯ ಶಿವಮೊಗ್ಗ

ತಂದೆಯನ್ನು ತಿಂಡಿಗೆ ಕರೆಯಲು ಬಂದ ಮಗನ ಕರೆದೊಯ್ದ ದುರ್ವಿಧಿ, ದೇವಾ ಈ ಸಾವು ನ್ಯಾಯವೆ ?

ವಿದ್ಯುತ್ ತಂತಿ ಹರಿದು ಅರಹತೊಳಲಿನಲ್ಲಿ ಬಾಲಕ ಸಾವು

ತೋಟದಲ್ಲಿ ಕೆಲಸ ಮಾಡುತ್ತಿದ್ದ ತಂದೆಯನ್ನು ತಿಂಡಿಗೆ ಕರೆಯಲು ಬಂದ ಮಗನ ತಲೆಯ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು ಸುಮಾರು ೧೩ ವರ್ಷದ ಬಾಲಕ ಸ್ಥಳದಲ್ಲೇ ಸಾವು ಕಂಡ ಘಟನೆ ಬೆಳಗ್ಗೆ ಭದ್ರಾವತಿ ತಾಲೂಕು ಅರಹತೊಳಲಿನಲ್ಲಿ ನಡೆದಿದೆ.
ಮಂಜಪ್ಪ ಎಂಬುವವರ ಮಗ ನಿತೀನ್(ಮಹೇಶ್) ಎಂಬ ೮ನೇ ತರಗತಿ ವಿದ್ಯಾರ್ಥಿ ಈ ದುರಂತಕ್ಕೆ ಒಳಗಾದ ದುದೈರ್ವಿ ಕಲ್ಲಿಹಾಳ್‌ನ ಶ್ರೀ ಮಂಜುನಾಥ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಈ ಬಾಲಕ ಓದಿನಲ್ಲಿ ಮುಂದಿದ್ದ. ದುರಾದೃಷ್ಟ ಕೈ ಕೊಟ್ಟಾಗ ವಿದ್ಯುತ್ ತಂತಿಯೇ ಆತನ ಮೇಲೆ ಬಿದ್ದಿದೆ. ಕಾರಣ ತಿಳಿದು ಬಂದಿಲ್ಲ.
ಈ ಸಂದರ್ಭದಲ್ಲಿ ಹೊಳೆಹೊನ್ನೂರು ಪೊಲೀಸರು ಆಗಮಿಸಿದ್ದರು. ಅಲ್ಲಿಗೆ ಬಂದ ಮೆಸ್ಕಾಂನ ಲೈನ್‌ಮ್ಯಾನ್ ಹಾಗೂ ಇಂಜಿನಿಯರ್‌ಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ವಿದ್ಯುತ್ ತಂತಿಗೆ ಬಾಳಿಕೆಯ ಶಕ್ತಿ ಕುಂದಿತ್ತು ಎನ್ನಲಾಗಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯವಿದೆ. ಇಂಜಿನಿಯರ್‌ಗಳ ಕರ್ತವ್ಯ ಇಲ್ಲಿ ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ಬಾಲಕ ಅಸಹಜ ಸಾವಿಗೆ ಇಡೀ ಗ್ರಾಮ ಕಂಬನಿ ಮಿಡಿದಿದೆ.

Ad Widget

Related posts

ಶಿವಮೊಗ್ಗ ಎಫ್.ಎಂ.-90.8 ಸಮುದಾಯ ರೇಡಿಯೋ ಕೇಂದ್ರ ಆರಂಭ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 1 ಬಲಿ, 46 ಸೋಂಕು

Malenadu Mirror Desk

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ತನಿಖೆ ಶೀಘ್ರ : ಮಧುಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.