ರೋಹಿಣಿ ಸಿಂಧೂರಿ ಬಗ್ಗೆ ಅಷ್ಟೊಂದು ಗೊತ್ತಿಲ್ಲ ಆದರೆ ಶಿಲ್ಪಾ ನಾಗ್ ಮಾಧ್ಯಮದ ಮುಂದೆ ಹೋಗಿದ್ದು ತಪ್ಪು. ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಅಭಿಪ್ರಾಯ.
ಐಎಎಸ್ ಅಧಿಕಾರಿಗಳ ಕಚ್ಚಾಟ ಮತ್ತು ಜನಪ್ರತಿನಿಧಿಗಳ ಗುಂಪುಗಾರಿಕೆ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಶಿಲ್ಪಾ ನಾಗ್ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಒಳ್ಳೆಯ ಅಧಿಕಾರಿಣಿ ಕೂಡಾ ಹೌದು. ಗ್ರಾಮೀಣಾಭಿವೃದ್ಧಿ ಬಗ್ಗೆ ಕೇರಳಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದರು. ಅವರು ಸಮಸ್ಯೆಯ ಬಗ್ಗೆ ಉನ್ನತ ಅಧಿಕಾರಿಗಳಿಗೆ ಹೇಳಬಹುದಿತ್ತು. ಆದರೆ ಪತ್ರಿಕಾಗೋಷ್ಠಿ ಮಾಡಿರುವುದು ಸರಿಯಲ್ಲ ಎಂದರು.
ಇಬ್ಬರೂ ಅಧಿಕಾರಿಗಳಿಗೆ ತಿಳಿಹೇಳಿ ಸಮಸ್ಯೆ ಇತ್ಯರ್ಥಮಾಡಲಾಗುವುದು. ರಾಜಕಾರಣಿಗಳು ಅಧಿಕಾರಿಗಳ ವಿಚಾರದಲ್ಲಿ ಗುಂಪುಗಾರಿಕೆ ಮಾಡುವುದು ಸರಿಯಲ್ಲ ಎಂದೂ ಅವರು ಹೇಳಿದರು
previous post