ಶಿವಮೊಗ್ಗ ಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ಸೋಮವಾರ 9 ಮಂದಿ ಸಾವಿಗೀಡಾಗಿದ್ದಾರೆ. ಹೊಸದಾಗಿ ಒಟ್ಟು 496 ಮಂದಿಗೆ ಸೋಂಕು ತಗುಲಿದ್ದು, ಇದೇ ವೇಳೆ 878 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 869ಕ್ಕೇರಿದೆ.
ಶಿವಮೊಗ್ಗ ತಾಲೂಕಿನಲ್ಲಿ 147,ಭದ್ರಾವತಿಯಲ್ಲಿ 64,ತೀರ್ಥಹಳ್ಳಿಯಲ್ಲಿ 63,ಶಿಕಾರಿಪುರ 64, ಸಾಗರ 77,ಹೊಸನಗರ 23,ಸೊರಬದಲ್ಲಿ 47 ಹಾಗೂ ಇತರೆ ಜಿಲ್ಲೆಯ 11 ಮಂದಿಯಲ್ಲಿ ಕೊರೊನ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 6268 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
previous post