ರಿಪ್ಪನ್‌ಪೇಟೆ;- ಪಟ್ಟಣದ ಬರುವೆ ಗ್ರಾಮದಲ್ಲಿರುವ ಬಿಸಿಎಂ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯದ ವಸತಿ ನಿಲಯದಲ್ಲಿ ೩೦ ಬೆಡ್‌ನ ಕೊವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ನೋಡ್‌ಲ್ ಅಧಿಕಾರಿಯಾಗಿ ರಾಜೇಂದ್ರ ರವರನ್ನು ನೇಮಕ ಮಾಡಿದ್ದು . ಕಂದಾಯ ಇಲಾಖೆಯ ಉಪತಹಶೀಲ್ದಾರ್ ಹುಚ್ಚಾರಾಯಪ್ಪ, ಕಂದಾಯ ನಿರೀಕ್ಷಕ ಎಸ್. ರಾಜು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಿ.ಚಂದ್ರಶೇಖರ್ ರವರ ಉಸ್ತುವಾರಿಯೊಂದಿಗೆ ಈಗಾಲೇ ೧೦ ಜನ ಕೊರೊನಾ ಸೋಂಕಿತರು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಮತ್ತು ಆರಗಜ್ಞಾನೇಂದ್ರ ಸ್ಥಳ ಪರಿಶೀಲನೆ ನಡೆಸಿ ಕೊರೊನಾ ಆರೈಕೆ ಕೇಂದ್ರ ತೆರೆಯಲು ಸೂಚಿಸಿದ ಹಿನ್ನಲೆಯಲ್ಲಿ ತಹಶೀಲ್ದಾರ್ ವಿ. ರಾಜೀವ್ ರವರ ಮಾರ್ಗದರ್ಶನದಲ್ಲಿ ಕೊರೊನಾ ಆರ್‍ಯೆಕೆ ಕೇಂದ್ರ ಪ್ರಾರಂಬಿಸಲಾಗಿದೆ.
ಕೊರೋನಾ ಲಕ್ಷಣ ಕಂಡಬಂದ ಹಲವರು ಕ್ವಾರೆಂಟೈನ್ ಆಗದೆ ಊರು ಸುತ್ತುವುದರೊಂದಿಗೆ ಇನ್ನೂಬ್ಬರಿಗೆ ಹರಡುವಂತೆ ಮಾಡುತ್ತಿದ್ದು ಸರ್ಕಾರ ಅಂತವರಿಗಾಗಿ
ಕೊರೊನಾ ಕೇರ್ ಸೆಂಟರ್ ಪ್ರಾರಂಭಿಸುವ ಮೂಲಕ ಸೋಂಕಿತರಿಗೆ ಮನೆಯ ಬದಲು ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುವುದು ಸೋಂಕಿತರಲ್ಲಿ ಉಸಿರಾಟದ ಮತ್ತು ಇನ್ನಿತರ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗಳಿಗೆ ಕಳುಹಿಸು ಸಹ ಸಹಕಾರಿಯಾಗುವೆಂಬ ಉದ್ದೇಶದಿಂದಾಗಿ ಹೊಸನಗರ ತಾಲ್ಲೂಕಿನ ಹೊಸನಗರದ ಬಿಸಿಎಂ ವಿದ್ಯಾರ್ಥಿ ನಿಲಯ ಹಾಗೂ ಹುಂಚ ಜೈನಮಠದ ಯಾತ್ರಿ ನಿವಾಸದಲ್ಲಿ ಕೊರೊನಾ ಕೇರ್ ಸೆಂಟರ್ ಆರಂಭಿಸಲಾಗಿದೆ.