Malenadu Mitra
ಸಾಗರ

ಅಪಘಾತಕ್ಕೊಳಗಾದವರ ರಕ್ಷಣೆ: ಮಾನವೀಯತೆ ಮೆರೆದ ಶಾಸಕ ಹಾಲಪ್ಪ

ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿ ಶಾಸಕ ಹರತಾಳು ಹಾಲಪ್ಪ ಮಾನವೀಯತೆ ಮೆರೆದಿದ್ದಾರೆ.
ಸೊರಬ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ಲಿಂಗದಹಳ್ಳಿ (ಕೆರೋಡಿ ಕ್ರಾಸ್) ಸಮೀಪದಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಅದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಹಾಲಪ್ಪರು ತಮ್ಮ ವಾಹನವನ್ನು ನಿಲ್ಲಿಸಿ, ಸಹಾಯಕ್ಕೆ ತೆರಳಿದ್ದಾರೆ. ಅಲ್ಲಿದ್ದ ಸ್ಥಳೀಯರ ಸಹಾಯ ಪಡೆದು, ಆಕ್ಸಿಡೆಂಟ್ ಆಗಿದ್ದ ಕಾರನ್ನ ಮೇಲಕ್ಕೆ ಎತ್ತಿದ್ದಾರೆ. ಬಳಿಕ ಗಾಯಗೊಂಡಿದ್ದ ಚೇತನಾ ಜೈನ್ ಎಂಬ ಯುವತಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಷ್ಟೆ ಅಲ್ಲದೆ, ಸಾಗರದ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಿಸಿದ್ದಾರೆ.
ಶಾಸಕರ ಈ ಸಾಮಾಜಿಕ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ad Widget

Related posts

ಶಿವಮೊಗ್ಗದಲ್ಲಿ ಇಂದೂ ತ್ರಿಶತಕ ದಾಟಿದ ಸೋಂಕು, ಎರಡುಸಾವು

Malenadu Mirror Desk

ದೊಡ್ಡೇರಿ ಈರಪ್ಪರಿಗೆ ಗಣಪತಿಯಪ್ಪ ಪ್ರಶಸ್ತಿ ಕಾಗೋಡು ಚಳವಳಿ ನೆನಪು ಕಾರ್ಯಕ್ರಮ

Malenadu Mirror Desk

ಶರಾವತಿ ಸಂತ್ರಸ್ಥರ ಭೂಮಿ ಸಮಸ್ಯೆಗೆ ಕಾನೂನು ಹೋರಾಟ, ಅರಣ್ಯ,ಕಂದಾಯ ಭೂಮಿ ಜಂಟಿ ಸರ್ವೆ,
ರಾಜ್ಯಸರಕಾರದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.