Malenadu Mitra
ರಾಜ್ಯ ಶಿವಮೊಗ್ಗ

ಆಶ್ರಯ ಮನೆ ಕಾಮಗಾರಿ ಚುರುಕುಗೊಳಿಸಿ

ಶಿವಮೊಗ್ಗಮಹಾನಗರ ಪಾಲಿಕೆ ವತಿಯಿಂದ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರವೆ ಮನೆ ವಿತರಿಸಲು ಆದೇಶಿಸಬೇಕೆಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪಾಲಿಕೆಯ ಕಾಂಗ್ರೆಸ್ ಪಕ್ಷದ ನಿಯೋಗವು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಗೋವಿಂದಾಪುರದಲ್ಲಿ ಆಶ್ರಯ ಜಿ+2 ಮಾದರಿಯ ಮನೆಗಳನ್ನು ನಿರ್ಮಿಸುತ್ತಿದ್ದು, ಅದರ ಕಾಮಗಾರಿಯು ವಿಳಂಬವಾಗುತ್ತಿದೆ. ಹಾಗೂ ಕರ್ನಾಟಕ ಕೊಳಚೆಗೇರಿ ಅಭಿವೃದ್ಧಿ ನಿಗಮದಿಂದ ಶಿವಮೊಗ್ಗ ನಗರದಲ್ಲಿ ಸ್ಲಂಗಳನ್ನು ಗುರುತಿಸಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ49,671ರೂ., ಸಾಮಾನ್ಯ ವರ್ಗದವರಿಗೆ 73671 ರೂ. ಡಿಡಿ ಮೂಲಕ ಕಟ್ಟಿಸಿಕೊಂಡು ವರ್ಷಗಳೇ ಕಳೆದರು ಮನೆ ನಿರ್ಮಿಸಿಕೊಡಲು ವಿಳಂಬ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
2019ರಲ್ಲಿ ಶಿವಮೊಗ್ಗದಲ್ಲಿ 964 ಮನೆ ಕಟ್ಟಿಕೊಡಲು ಕೊಳಚೆ ನಿರ್ಮೂಲನ ಮಂಡಳಿಗೆ ಹಣ ನೀಡಲಾಗಿತ್ತು. ಟೆಂಡರ್‌ದಾರರಿಗೆ ಮನೆ ಕಟ್ಟಿಕೊಡಲು ಏಪ್ರಿಲ್ ತಿಂಗಳ ಅವಧಿ ಮುಗಿದಿದ್ದು, ಆದರೆ ಕೇವಲ 342 ಮನೆಗಳು ಮಾತ್ರ ಕಟ್ಟಲಾಗಿದೆ. ಉಳಿದ 622 ಮನೆಗಳು ಯಾವುದೇ ರೀತಿಯ ಪ್ರಗತಿ ಕಂಡಿಲ್ಲ. ಫಲಾನುಭವಿಗಳು ಸ್ಲಂಬೋರ್ಡ್ ಅಧಿಕಾರಿಗಳಿಗೆ ಭೇಟಿ ಮಾಡಿದ್ದರು ಪ್ರತಿನಿತ್ಯ ಒಂದಲ್ಲ ಒಂದು ಕಾರಣ ನೀಡುತ್ತಿದ್ದಾರೆ ಎಂದು ದೂರಲಾಗಿದೆ.
 ಕಾರ್ಮಿಕರ ಕಾರ್ಡ್ ಇದ್ದವರಿಗೆ 1.628ಕ್ಷ ರೂ. ಸಾಲ ಕೊಡುತ್ತೇವೆಂದು ಹೇಳಿದ್ದರು. ಆದರೆ ಕಾರ್ಡ್ ಇದ್ದರೂ ಈಗ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಬ್ಯಾಂಕ್‌ನಿಂದ ಸಾಲ ಸಿಗದೆ ಇದ್ದಲ್ಲಿ ಮನೆಗಳು ಅಪೂರ್ಣವಾದಂತೆ. ಬ್ಯಾಂಕ್ ಸಾಲ ಆಗದೆ ಇರುವ ಮನೆಗಳಿಗೆ ಗಿಲಾವ್ ಆಗಲಿ, ಕಿಟಕಿ ಬಾಗಿಲುಗಳಾಗಲಿ, ವಿದ್ಯುತ್ ಹಾಗೂ ಪ್ಲಂಬಿಂಗ್ ವರ್ಕ್ ಮಾಡಿಕೊಡುವುದಿಲ್ಲ. ಮನೆಗಳು ಮನುಷ್ಯನ ಅಸ್ತಿಪಂಜರದಂತೆ ಕಟ್ಟಿಕೊಡಲಾಗುತ್ತಿದೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಆದ್ದರಿಂದ ಕೂಡಲೆ ನೆನೆಗುದಿಗೆ ಬಿದ್ದಿರುವ  ಮನೆಗಳನ್ನು ಕಟ್ಟುವ ಕೆಲಸ ಪೂರ್ಣಗೊಳಿಸಬೇಕು ಹಾಗೂ ಆಶ್ರಯ ಮನೆ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೀಶ್, ಆರ್.ಸಿ.ನಾಯಕ್ ಇನ್ನಿತರರಿದ್ದರು.

Ad Widget

Related posts

ಅಂತಃಕರಣವಿಲ್ಲದ ಪ್ರಧಾನಿ, ಚುನಾವಣೆ ಸ್ವಾರ್ಥಕ್ಕೆ ಕಾಯಿದೆ ವಾಪಸ್ : ಕಿಮ್ಮನೆ

Malenadu Mirror Desk

ಹರತಾಳು ಕೆರೆ ಜೀರ್ಣೋದ್ದಾರಕ್ಕೆ ನಿರ್ಧಾರ

Malenadu Mirror Desk

ಶೋಷಿತರಿಗೆ ದನಿ ನೀಡಿದ ಸಿದ್ದಲಿಂಗಯ್ಯ: ಕುವೆಂಪು ವಿವಿಯಲ್ಲಿ ನುಡಿನಮನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.