ಶಿವಮೊಗ್ಗ ಜಿಲ್ಲೆಯಲ್ಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದ್ದು, ರೈತರು ವಿಮೆಗೆ ನೊಂದಾಯಿಸಿಕೊಳ್ಳ ಲು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ ಕೋರಿದ್ದಾರೆ.
ಸದರಿ ಯೋಜನೆಯಡಿ ಜಿಲ್ಲೆಯ ರೈತರು ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ. ಅಡಿಕೆ, ಕಾಳುಮೆಣಸು ಮತ್ತು ಶುಂಠಿ ಬೆಳಗಳಿಗೆ ವಿಮೆ ನೋಂದಾಯಿಸಲು ಜೂನ್ 30 ಹಾಗೂ ಮಾವು ಬೆಳೆಗೆ ಜುಲೈ 31ವರೆಗೆ ದಿನಾಂಕ ನಿಗದಿಪಡಿಸಲಾಗಿದೆ. ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಆಧಾರ್ ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್ ಸಂಪರ್ಕಿಸಿ, ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ತೋಟಗಾರಿಕಾ ಇಲಾಖೆ ಕಚೇರಿ ಅಥವಾ ರೈತ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ 9448036611, ಶಿಕಾರಿಪುರ 9663634388, ಸಾಗರ 7892782514, ಹೊಸನಗರ 9591695327, ಭದ್ರಾವತಿ 9900046087, ಸೊರಬ 9108280642, ತೀರ್ಥಹಳ್ಳಿ 9900046084 ಸಂಪರ್ಕಿಸಬಹುದು.
ಮೀನುಮರಿ ಪಾಲನೆಗೆ ಸಹಾಯಧನ : ದಿನಾಂಕ ವಿಸ್ತರಣೆ
ಕೆರೆಗಳ ಜಲಾಶಯಗಳ ಅಂಚಿನಲ್ಲಿ ಕೊಳಗಳನ್ನು ನಿರ್ಮಿಸಿ ಮೀನುಮರಿ ಪಾಲನೆ ಮಾಡಿ ಬೆಳೆಸಿದ ಮೀನು ಮರಿಗಳನ್ನು ಅದೇ ಕೆರೆಗಳಿಗೆ ಬಿತ್ತನೆ ಮಾಡಿ ಮೀನು ಕೃಷಿ ಕೈಗೊಳ್ಳುವವರಿಗೆ ಸಹಾಯಧನ ಯೋಜನೆಯಡಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಕೆರೆಗಳ, ಜಲಾಶಯಗಳ ಮೀನುಪಾಶುವಾರು ಹಕ್ಕು ಪಡೆದ ಗುತ್ತಿಗೆದಾರರು, ಬಿಡ್‌ದಾರರು, ಪರವಾನಿಗೆದಾರರು ಹಾಗೂ ಮೀನುಗಾರಿಕೆ ಸಹಕಾರ ಸಂಘಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಮೀನುಪಾಶುವಾರು ಹಕ್ಕಿನ ಅವಧಿ ಕನಿಷ್ಟ 2ವರ್ಷ ಬಾಕಿ ಇರುವ ಗುತ್ತಿಗೆದಾರರು ಈ ಯೋಜನೆಯಡಿ ಅರ್ಜಿ ಹಾಕಬಹುದು.
ಮೀನುಗಾರಿಕಾ ಇಲಾಖೆಯಿಂದ ಪಡೆದ ಕೆರೆಗಳ ಮೀನುಪಾಶುವಾರು ಹಕ್ಕಿನ ನವೀಕರಣಕ್ಕಾಗಿ ಹಣ ಪಾವತಿಗಾಗಿ ನಿಗದಿಪಡಿಸಲಾಗಿದ್ದ ದಿನಾಂಕವನ್ನು ಸಹ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಮೀನುಪಾಶುವಾರು ಹಕ್ಕಿನ ನವೀಕರಣ ಹಣ ಪಾವತಿಯ ಶೇ.25ರಷ್ಟು ರಿಯಾಯಿತಿಯನ್ನು ಸರ್ಕಾರ ಘೋಷಿಸಿದ್ದು, ರಿಯಾಯಿತಿ ದರದಂತೆ ಹಣ ಪಾವತಿಸುವಂತೆ ಮೀನುಗಾರಿಕಾ ಉಪನಿರ್ದೇಶಕರು ಕೋರಿದ್ದಾರೆ.