Malenadu Mitra
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ಸಿರಿವಂತರು ಬಡವರ ಸೇವೆಗೆ ಮುಂದಾಗಬೇಕು : ಆರಗ ಜ್ಞಾನೇಂದ್ರ

ಹುಂಚದ ಕಟ್ಟೆಯ ಆಸ್ಪತ್ರೆಗೆ ಆರೋಗ್ಯ ಪರಿಕರಗಳ ಹಸ್ತಾಂತರ

ರಿಪ್ಪನ್‌ಪೇಟೆ: ಕೊರೊನಾ ಮೊದಲನೇ ಅಲೆಯಲ್ಲಿ ಗ್ರಾಮೀಣ ಪ್ರದೇಶ ಸುರಕ್ಷಿತವಾಗಿತ್ತು. ಆದರೆ ಎರಡನೇ ಅಲೆಯು ಹಳ್ಳಿ ಹಳ್ಳಿಗಳಲ್ಲಿ ವ್ಯಾಪಕವಾಗಿ ಹರಡುವ ಮೂಲಕ ಅಪಾರ ಸಾವು ನೋವು ಸಂಭವಿಸುತ್ತಿರುವುದು ತೀವ್ರ ದು:ಖಕರ ವಿಷಯ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿನ ಸಿರಿವಂತರು ಬಡವರ ಸೇವೆಗೆ ಮುಂದಾಗಬೇಕೆಂದು ತೀರ್ಥಹಳ್ಳಿ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ಹುಂಚದ ಕಟ್ಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಆಯೋಜಿಸಿದ್ದ ಆರೋಗ್ಯ ಪರಿಕರಗಳಾದ ಆಕ್ಸಿಜನ್ ಕಾನ್ಸಂಟ್ರೇಟರ್. ಫೇಸ್ ಶೀಲ್ಡ್. ಮಾಸ್ಕ್ ,ಸ್ಯಾನಿಟ್ಯೆಸರ್ ಹುಂಚದ ಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಜನತೆ ಕೊರೊನಾದ ಸಂಕಷ್ಟದಿಂದ ಬಳಲುತ್ತಿದ್ದು ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಸಿರಿವಂತರು ಗ್ರಾಮೀಣ ಭಾಗದಲ್ಲಿನ ಜನತೆ ಸಹಕಾರ ನೀಡುವುದರ ಮೂಲಕ ಮಾನವನ ಮೂಲ ಗುಣವಾದ ಮಾನವೀತೆಯ ಗುಣವನ್ನು ಅಳವಡಿಸಿಕೊಂಡು ಸೇವೆಗೆ ಮುಂದಾದರೆ ಅವರುಗಳನ್ನು ಕೊರೊನಾದ ಸಂಕಷ್ಟದಿಂದ ಪಾರು ಮಾಡಬಹುದು ಎಂದ ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಭಾಗದ ಜನತೆಯ ಆರೋಗ್ಯದ ರಕ್ಷಣೆಗೆ ಶ್ರೀಕಾಂತ್ ರವರು ಮುಂದಾಗಿರುವುದ ಶ್ಲಾಘನೀಯ ಎಂದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ನಿಯಂತ್ರಣ ಹಾಗೂ ಪತ್ತೆ ಹಚ್ಚಲು ಜನತೆಯ ಸಹಕಾರ ಅತ್ಯಗತ್ಯ. ಆರೋಗ್ಯದಲ್ಲಿ ಜ್ವರ .ಕೆಮ್ಮು ಮೈ ಕೈ ನೋವುಗಳಿಂದ ಆರೋಗ್ಯದಲ್ಲಿ ವೈಪರಿತ್ಯ ಉಂಟಾದರೆ ಮನೆಯಲ್ಲಿಯೆ ಇದ್ದು ಔಷದಿಗಳನ್ನು ತಗೆದುಕೊಳ್ಳುವುದನ್ನು ಬಿಟ್ಟು ತಕ್ಷಣ ಪ್ರಾಥಮಿಕ ಆರೋಗ್ಯಕ್ಕೆ ಬಂದು ತಪಾಸಣೆ ಮಾಡಿಕೊಳ್ಳುವುದರ ಮೂಲಕ ಕೊರೊನಾದ ಹರಡುವಿಕೆನ್ನು ತಡೆಗಟ್ಟಲು ಮುಂದಾಗುವದರ ಜತೆಗೆ ಕೊರೊನಾ ಮುಕ್ತ ಗ್ರಾಮದ ರಕ್ಷಣೆಯನ್ನು ಮಾಡುವವಂತಹ ಜವಬ್ದಾರಿ ಪ್ರತಿ ನಾಗರೀಕರಲ್ಲಿ ಇದ್ದರೆ ಮಾತ್ರ ಕೊರೊನಾದ ನಿರ್ನಾಮ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಟ್ಟೆ ರಘು, ಉಪಾಧ್ಯಕ್ಷೆ ಶೋಭಾ ರೇಣುಕಪ್ಪ, ವೈದ್ಯಾಧಿಕಾರಿ ಶೋಭಾ. ಶಿವಮೊಗ್ಗ ನಗರ ಸಭಾ ಮಾಜಿ ಅಧ್ಯಕ್ಷ ಪಾಲಾಕ್ಷ. ಹುಂಚದ ಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧುಕ್ಷ ಕಟ್ಟೆ ಮಹೇಶ್. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶರಧಿ ಪೂರ್ಣೇಶ್ ಗ್ರಾಮಸ್ಥರಾದ ಧರ್ಮಪ್ಪ, ಚೇತನ್, ಗುರಪ್ಪ ಗೌಡ ಇನ್ನಿತರರು ಉಪಸ್ಥಿತರಿದ್ದರು.

Ad Widget

Related posts

ರೈತ ವಿರೋಧಿ ಕೃಷಿ ಕಾಯ್ದೆ ಹಿಂತೆಗೆತಕ್ಕೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ

Malenadu Mirror Desk

ನಿರಂತರ ಪ್ರಯತ್ನದಿಂದ ಸಾಧನೆ: ಹೆಚ್.ಕೆ.ಕೃಷ್ಣಮೂರ್ತಿ, ಈಡಿಗ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾಪುರಸ್ಕಾರ

Malenadu Mirror Desk

ಪರೀಕ್ಷಾ ಶುಲ್ಕ ಹೆಚ್ಚಳ : ಕುಲಪತಿಗಳಿಗೆ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.