ತೈಲಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ಶಿವಮೊಗ್ಗದ ವಿವಿಧ ಪೆಟ್ರೋಲ್ ಬಂಕ್‌ಗಳ ಬಳಿ ಸರಣಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ನೇತೃತ್ವದಲ್ಲಿ ಕುವೆಂಪು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ಹೆಚ್.ಎಸ್.ಸುಂದರೇಶ್ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕನ್ನ ಹಾಕಲು ಹೊರಟಿದೆ. ಪೆಟ್ರೋಲ್ ಬೆಲೆ ಏರಿಸಿ ಸುಮಾರು ೨೧.೬೦ ಲಕ್ಷ ಕೋಟಿ ಗಳಿಸಿದೆ. ಮೇ ತಿಂಗಳೊಂದರಲ್ಲಿಯೇ ೧೬ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ ಎಂದರು. ಮುಖಂಡರಾದ ರವಿಕುಮಾರ್,ಪಲ್ಲವಿ, ದೇವೇಂದ್ರಪ್ಪ, ಚಂದ್ರಶೇಖರ್, ಮೋಹನ್, ಸತ್ಯನಾರಾಯಣ, ಮೂರ್ತಿ, ಸೈಯದ್ ವಾಯಿದ್ ಅಡ್ಡು, ಸೌಗಂಧಿಕ ಇದ್ದರು.
ವಿನೋಬ ನಗರದ ರಾಜ್ ಫ್ಯೂಲ್ಸ್ ಬಳಿ ನಡೆದ ಪ್ರತಿಭಟನೆ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಕೇಂದ್ರ ಸರ್ಕಾರ ಅವೈಜ್ಞಾನಿಕವಾದ ರೀತಿಯಲ್ಲಿ ತೈಲ ಬೆಲೆಯನ್ನು ಏರಿಸಿದೆ. ಇದರಿಂದ ಜನ ಸಾಮಾನ್ಯರ ಮೇಲೆ ಹೊರೆಯಾಗಿದೆ. ಕಚ್ಚಾತೈಲ ಬೆಲೆ ಇಳಿದಿದ್ದರೂ ಕೂಡ ಕೇಂದ್ರ ಸರ್ಕಾರದ ಅಸಮರ್ಪಕ ವಿತ್ತೀಯ ನೀತಿಯಿಂದಾಗಿ ಬೆಲೆ ಏರಿಕೆಯಾಗಿದೆ. ಮೋದಿ ಸರ್ಕಾರ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅಚ್ಚೆದಿನ್ ದೇಶವಾಸಿಗಳಿಗೆ ಕನಸಾಗಿದೆ ಎಂದು ಟೀಕಿಸಿದರು.ಕೆ.ರಂಗನಾಥ್, ರೇಖಾ ರಂಗನಾಥ್,ಓಂಪ್ರಕಾಶ್ ತೇಲ್ಕರ್, ನವುಲೆ ಶ್ರೀಧರ್, ಹೆಚ್.ಪಿ.ಗಿರೀಶ್, ಎಸ್.ಪಿ.ದಿನೇಶ್, ಹಾಲಪ್ಪ, ಶಿವಾನಂದ್ ಮತ್ತಿತರರಿದ್ದರು.
ತಮಟೆ ಚಳವಳಿ
ಶತಕ ಬಾರಿಸಿದ ಪೆಟ್ರೋಲ್ ಬೆಲೆ ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ದುರ್ಗಿಗುಡಿಯ ಹೆಚ್‌ಎಂ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಿದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್‌ಕುಮಾರ್, ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಮುಖಂಡರಾದ ಕೆ.ರಂಗನಾಥ್, ರೇಖಾ ರಂಗನಾಥ್, ನಿತಿನ್, ಕುಮರೇಶ್, ಸೈಯದ್ ಜಮೀಲ್,ಕಿರಣ್, ರಂಜಿತ್, ರಾಹುಲ್, ವೆಂಕಟೇಶ್, ರಾಕೇಶ್, ಶರತ್, ಪವನ್, ಪ್ರಜ್ವಲ್, ಇಫ್ರಾನ್ ಸೇರಿದಂತೆ ಹಲವರಿದ್ದರು.
ದೀಪಕ್ ಪೆಟ್ರೋಲ್ ಬಂಕ್ ಬಳಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮುಖಂಡತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. . ಕಾಂಗ್ರೆಸ್ ಮುಖಂಡರಾದ ಶ್ಯಾಮ್ ಸುಂದರ್, ದೀಪಕ್‌ಸಿಂಗ್, ಸುವರ್ಣ, ಮಂಜುನಾಥ್, ಲಕ್ಷ್ಮಣ್, ಆಸಿಫ್, ಪ್ರಸನ್ನ ಸೇರಿದಂತೆ ಹಲವರಿದ್ದರು.
ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತೈಲ ಬೆಲೆ ವಿರೋಧಿಸಿ ಎತ್ತಿನಗಾಡಿ ಚಳವಳಿಯ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಮುಖಂಡರಾದ ಅಕ್ಬರ್, ಹೆಚ್.ಎಂ.ಮಹದೇವ, ಅನ್ವರ್, ಶರತ್, ವಿಜಯಲಕ್ಷ್ಮೀ, ಶಾದಾಬ್, ಪುಟ್ಟಮ್ಮ, ಇರ್ಷಾದ್, ಬಾಬಣ್ಣ ಹಾಗೂ ಇತರೆ ಮುಖಂಡರು ಇದ್ದರು.
ಹೊಳೆಬಸ್‌ಸ್ಟಾಪ್ ಪೆಟ್ರೋಲ್ ಬಂಕ್ ಬಳಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂದನ್, ಪ್ರಮುಖರಾದ ಕಾಶಿ ವಿಶ್ವನಾಥ್, ವಿನಯ್, ಗಿರೀಶ್, ಅಬ್ದುಲ್, ಪ್ರಮೋದ್, ಜಫರುಲ್ಲಾ, ಸಂದೇಶ್, ಅರ್ಜುನ್‌ಮತ್ತಿತರರಿದ್ದರು.
ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುವ ಮೂಲಕ ಜನ ಸಾಮಾನ್ಯರಿಗೆ ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೆ ಕಷ್ಟಕರವಾಗಿದೆ. ಇಂತಹ ಪ್ರಜಾವಿರೋಧಿ ನೀತಿ ವಿರುದ್ಧ ಜನ ಸಿಡಿದೇಳಬೇಕಿದೆ
– ಎನ್.ರಮೇಶ್, ಸೂಡಾ ಮಾಜಿ ಅಧ್ಯಕ್ಷ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯಿಂದಾಗಿ ಇಂದು ಜನ ಸಾಮಾನ್ಯರು ಜೀವನ ಮಾಡುವುದೆ ಕಷ್ಟಕರವಾಗಿದೆ. ಜನರಿಗೆ ಹುಸಿ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಜನರಿಗೆ ಮಂಕು ಬೂದಿ ಎರಚಿದೆ. –ಕೆ.ಬಿ.ಪ್ರಸನ್ನ ಕುಮಾರ್ ,ಮಾಜಿ ಶಾಸಕ