ಶಿವಮೊಗ್ಗ ನಗರದ ಶಿಮ್ಸ್, ಕೋಟೆ ಪಿಎಚ್‍ಸಿ, ಸೀಗೆಹಟ್ಟಿ ಪಿಎಚ್‍ಸಿ, ಯುಬಿಎಚ್‍ಸಿ ಸುಭಾಷ್ ನಗರ ಸಾಗರ, ಯುಬಿಎಚ್‍ಸಿ ಚನ್ನಕೇಶವನಗರ ಶಿಕಾರಿಪುರ, ಪಿಎಚ್‍ಸಿ ಬಿಳಕಿ ಮತ್ತು ಹರಿಗೆ ಶಿಕಾರಿಪುರ ಮತ್ತು ಜನರಲ್ ಆಸ್ಪತ್ರೆ ಸೊರಬದಲ್ಲಿ ಲಭ್ಯವಿದೆ. ಈಗಾಗಲೇ ಮೊದಲ ಡೋಸ್ ಪಡೆದು ನಿಗದಿತ ಅವಧಿ ಮುಗಿದವರು ತಮ್ಮ ಗುರುತಿನ ಚೀಟಿ ತೋರಿಸಿ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 28 ದಿನ ಕಳೆದಿರುವವರಿಗೆ ಎರಡನೇ ಡೋಸ್ ಈ ಕೆಳಕಂಡ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ನಾಗರಾಜ ನಾಯಕ್ ತಿಳಿಸಿದ್ದಾರೆ.