Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗ -ಭದ್ರಾವತಿಯಲ್ಲಿ ಇಳಿಯದ ಕೊರೊನ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನದಿಂದ ಶನಿವಾರ 6 ಮಂದಿ ಜೀವಕಳೆದುಕೊಂಡಿದ್ದು, ಹೊಸದಾಗಿ 494 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 909 ಕ್ಕೇರಿದೆ. ಶನಿವಾರ 696 ಮಂದಿ ಗುಣಮುಖರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು 179 ಮಂದಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 105, ತೀರ್ಥಹಳ್ಳಿಯಲ್ಲಿ 19, ಶಿಕಾರಿಪುರದಲ್ಲಿ 46, ಸಾಗರದಲ್ಲಿ 47,ಹೊಸನಗರ 37,ಸೊರಬದಲ್ಲಿ 43 ಹಾಗೂ ಇತರೆ ಜಿಲ್ಲೆಯ 13 ಮಂದಿಯಲ್ಲಿ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಪ್ರಸ್ತುತ 5502 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Ad Widget

Related posts

ಅರಣ್ಯಇಲಾಖೆಯ ಪಾತ್ರ ತುಂಬಾ ಮುಖ್ಯ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ

Malenadu Mirror Desk

9ನೇ ದಿನಕ್ಕೆ ಕಾಲಿಟ್ಟ ಭೂ ಹಕ್ಕಿನ ಹೋರಾಟ : ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೀಟಿಂಗ್ ಫಿಕ್ಸ್

Malenadu Mirror Desk

ಕಾಗೋಡು ಚಳವಳಿಗೆ -70 , ಆತ್ಮಾವಲೋಕನಕ್ಕಿದು ಸಕಾಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.