ಪೆಟ್ರೋಲ್ ದರ ಲೀಟರ್‌ಗೆ ನೂರರ ಗಡಿದಾಟಿರುವುದನ್ನು ಖಂಡಿಸಿ ಸಾಗರದಲ್ಲಿ ಅಣಕು ಸಂಭ್ರಮ ಆಚರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕೇಕ್ ಕತ್ತರಿಸುವ ಮೂಲಕ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿದರು. ಕೊರೊನದಂತಹ ಸಂಕಷ್ಟದ ಕಾಲದಲ್ಲಿಯೂ ಪೆಟ್ರೋಲ್‌ದರ ನೂರರ ಗಡಿದಾಟಿರುವುದು ಜನಸಾಮಾನ್ಯರ ಮೇಲೆ ದೊಡ್ಡ ಪೆಟ್ಟು ನೀಡಿದೆ. ಜನರಿಗೆ ಉದ್ಯೋಗ, ವಹಿವಾಟು ಮತ್ತು ಕೂಲಿಗಳು ಇಲ್ಲ ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾತ್ರ ಆಗುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕೆಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಧಮಾಲತಿ ಕಲ್ಲಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಮ್ಮ ಪ್ರಮುಖರಾದ ಪರಿಮಳ,ರೇಷ್ಮಾಕೌಸರ್ ಮತ್ತಿತರರು ಭಾಗವಹಿಸಿದ್ದರು.