ಕೊರೋನಾ ಸಂಕಷ್ಟದ ಕಾಲದಲ್ಲಿ ದಿನೇ ದಿನೇ ಪೆಟ್ರೋಲ್ ಡೀಸಲ್ ಬೆಲೆ ನಿತ್ಯವು ಹೆಚ್ಚುತ್ತಿದ್ದು ಸರಕು ಸಾಗಾಣಿಕೆ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿದ್ದು ಗ್ರಾಮೀಣ ಪ್ರದೇಶದ ಬಡ ಕೂಲಿ ಕಾಮಿ೯ಕರ ಜೀವನ ನಿವ೯ಹಣೆ ದುಸ್ಥರವಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಡಿ.ಈ.ಮಧುಸೂದನ್ ಮತ್ತು ಅಶೀಫ್ ತೀವ್ರವಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರವನ್ನು ತರಾಟೆ ತಗೆದುಕೊಂಡರು.
ರಿಪ್ಪನ್‌ಪೇಟೆಯ ಸಾಗರ-ಹೊಸನಗರ-ಶಿವಮೊಗ್ಗ ರಸ್ತೆಯಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರದ ಜನವಿರೋಧಿ ನೀತಿಯಿಂದಾಗಿ ಬಡವರ ಮತ್ತು ಮಧ್ಯಮವಗ೯ದ ಜನರ ಜೀವನೋಪಾಯಕ್ಕೆ ಬಾಳಿಗೆ ಕೊಡಲಿ ಪೆಟ್ಟು ಬಿದ್ದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೇಸ್ ಕಾಯ೯ಕತ೯ರು ಪೆಟ್ರೋಲ್ ಬಂಕ್ ಬಳಿ ತಮಟೆ ಬಾರಿಸಿ ಪ್ರದಾನಿ ಮೋದಿ ವಿರುದ್ದ ಘೋಷಣೆ ಕೂಗಿ ತೈಲ ಬೆಲೆಯನ್ನು ಹೆಚ್ಚಳಗೊಳಿಸಿರುವ ಮೋದಿಜಿಯರು ಅಚ್ಚೇ ದಿನ ಬರುವುದೆಂದು ಹೇಳಿ ಸುಳ್ಳು ಪ್ರಚಾರ ನೀಡಿ ಅಧಿಕಾರದ ಗದ್ದುಗೆ ಏರಿ ಈಗ ಜನರ ಮರಣ ಶಾಸನ ಬರೆಯಲು ಹೊರಟಿದ್ದಾರೆಂದು ಪ್ರತಿಭಟನಾ ನಿರತರು ತೀವ್ರವಾಗಿ ಮೋದಿಜಿಯವರನ್ನು ವ್ಯಂಗ್ಯವಾಡಿದರು.
ಜಿ.ಪಂ.ಮಾಜಿ ಸದಸ್ಯೆ ಕುಮಾರಿ ಶ್ವೇತಾ ಅರ್.ಬಂಡಿ.ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಿತ್ತಲು ಈಶ್ವರಪ್ಪಗೌಡ,ನಿದೇ೯ಶಕ ಬಂಡಿ ರಾಮಚಂದ್ರ,ತೇಜ್‌ಮೂತಿ೯,ಜಿಲ್ಲಾ ಪರಿಶಿಷ್ಟ ಜಾತಿಯ ಸಂಘಟನಾ ಕಾಯ೯ದಶಿ೯ ಹಷ೯,ಗ್ರಾಮ ಪಂಚಾಯ್ತಿ ಸದಸ್ಯಗಣಪತಿ,ಎನ್.ಚಂದ್ರೇಶ್,ರತೇಶ್ವರಪ್ಪಗೌಡ,ಸಾರಾಭಿ,ಅಮ್ಮೀರ್‌ಹಂಜಾ,ಇನ್ನಿತರ ಕಾಂಗ್ರೇಸ್ ಮುಖಂಡರು ಹಾಜರಿದ್ದರು.