ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಒಂದಿಬ್ಬರು ಮಾತ್ರ ಚಕಾರ ಎತ್ತುತ್ತಿದ್ದಾರೆ. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿಯಿಲ್ಲ. ಕೆಲವರು ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಆಯನೂರು ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮದುವೆ ಮನೆಯಲ್ಲಿ ಮಂಗಳವಾದ್ಯ ಕೇಳಿಬರುತ್ತಿರುವಾಗ ಕೆಲವರಿಗೆ ಮದುವೆ ಗಂಡು ಆಗುವ ಆಸೆ ಇದ್ದಕ್ಕಿದ್ದಂತೆ ಹುಟ್ಟಿ ಬಿಡುತ್ತದೆ. ಆದರೆ ಹಾಗೆಲ್ಲ ಗಂಡಾಗಲು ಸಾಧ್ಯವಿಲ್ಲ. ಹುಡುಗಿಯೂ ಸಿಗಬೇಕಲ್ಲವೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಮಾರ್ಮಿಕವಾಗಿ ಹೇಳಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಆದರೆ ಪಕ್ಷದೊಳಗೆ ಅದಕ್ಕೊಂದು ಚೌಕಟ್ಟಿದೆ. ಅದನ್ನು ಮೀರಿ ಮಾತನಾಡುವುದು ಶೋಭೆಯಲ್ಲ ಎಂದ ಅವರು, ಈ ಎಲ್ಲಾ ಗೊಂದಲಗಳಿಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ರಾಜ್ಯಕ್ಕೆ ಬಂದಿದ್ದು, ಅವರು ಎಲ್ಲವನ್ನು ನೋಡಿಕೊಳ್ಳಲಿದ್ದಾರೆ ಎಂದರು.
ಸಹ್ಯಾದ್ರಿ ಕಾಲೇಜಿನಲ್ಲಿ ನಿರ್ಮಣವಾಗುತ್ತಿರುವ ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಸಂಬಂಧಿಸಿದಂತೆ ನಾನು ಆ
ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನೂ ಆಗಿದ್ದೆ. ಈ ಬಗ್ಗೆ ಯಾರು ತಮ್ಮ ಸಲಹೆಯನ್ನು ಕೇಳದೆ ಇರುವುದರಿಂದ ಅಲ್ಲದೆ ಉಸ್ತುವಾರಿ ಸಚಿವರು ಹಾಗೂ ಸಂಸದರು ಈಗಾಗಲೇ ಈ ವಿಚಾರದಲ್ಲಿ ಬಹುದೂರ ಸಾಗಿರುವುದರಿಂದ ಈಗ ತಾವು ಏನು ಹೇಳಲು ಇಚ್ಚಿಸುವುದಿಲ್ಲ -ಆಯನೂರು ಮಂಜುನಾಥ್