ಸಾಗರ-ತೀರ್ಥಹಳ್ಳಿ ಸಂಪರ್ಕದ ರಿಪ್ಪನ್‍ಪೇಟೆಯ ಅಂಚೆ ಕಛೇರಿಯ ಮುಂಭಾಗದಲ್ಲಿನ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಹೊಂಡದಲ್ಲಿ ನಿಂತು ಈಜು ಕೊಳದಂತಾಗಿದ್ದು ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಅರೆ ಬೆತ್ತಲೆಯಾಗಿ ಕಲುಷಿತ ನೀರಿನಲ್ಲಿ ಈಜಾಡುವ ಮೂಲಕ ಇಲಾಖೆಯ ಕಣ್ಣು ತೆರೆಸಿದ ಘಟನೆ ಸಾರ್ವಜನಿಕರಲ್ಲಿ ಕುತುಹಲಕ್ಕೆ ಕಾರಣವಾಯಿತು.
ಕಳೆದ ವರ್ಷವೂ ಸಹ ಇದೇ ರೀತಿ ಮಳೆಗಾಲದಲ್ಲಿ ನೀರು ನಿಂತು ಶಾಲಾ ಕಾಲೇಜ್ ಮಕ್ಕಳು ಈ ಮಾರ್ಗದಲ್ಲಿ ಸಂಚರಿಸುವಾಗ ವಾಹನಗಳು ವೇಗವಾಗಿ ಹೋಗಿ ವಿದ್ಯಾರ್ಥಿಗಳಿಗೆ ಕಲುಷಿತ ನೀರಿನ ಸ್ನಾನ ಮಾಡಿಸಿರುವುದನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯವರು ತಕ್ಷಣ ಸ್ಪಂದಿಸಿ ರಸ್ತೆಗೆ ಜಲ್ಲಿ ಪುಡಿ ಹಾಕಿ ಮುಚ್ಚಲಾಗಿದ್ದು ಪುನ: ಈ ಭಾರಿಯಲ್ಲಿ ಸಹ ಅದೇ ರೀತಿಯಲ್ಲಿ ಹೊಂಡ ಗುಂಡಿ ಬಿದ್ದು ರಸ್ತೆಯಲ್ಲಿ ಮಳೆಗಾಲದ ನೀರು ತುಂಬಿಕೊಂಡಿದ್ದು ಇಂದು ಮುಂಜಾನೆ ದ್ವಿಚಕ್ರದಲ್ಲಿ ಪತಿಪತ್ನ ಇಬ್ಬರು ಸಂಚರಿಸುವ ವೇಲೆ ಅಕಷ್ಮಿಕ ಗುಂಡಿಗೆ ಹಾರಿ ಬಿದ್ದು ಪರಿಣಾಮ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಪತ್ರಿಕಾ ವಿತರಕ ಟಿ.ಆರ್.ಕೃಷ್ಣಪ್ಪನವರ ಎದುರಿನಲ್ಲಿ ಈ ಘಟನೆ ಸಂಭವಿಸಿದ್ದು ತಕ್ಷಣವೇ ಅಂಗಿ ಕಳಚಿ ಕಲುಷಿತ ನೀರಿನಲ್ಲಿ ಈಜಾಡುವ ದೃಶ್ಯ ಸೆರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಇಲಾಖೆಯ ಸಹಾಯಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ದುರಸ್ಥಿಗೊಳಿಸಿದ್ದಾರೆ ಎನ್ನಲಾಗಿದೆ.
previous post
next post