Malenadu Mitra
ರಾಜ್ಯ ಶಿವಮೊಗ್ಗ

ಸಂಕಷ್ಟ ಕಾಲದಲ್ಲಿ ಹಂಚಿ ತಿನ್ನುವುದು ಮಾನವೀಯತೆ: ಶಫಿ ಸಾದುದ್ದೀನ್

ಕಷ್ಟಕಾಲದಲ್ಲಿ ನಮ್ಮಲ್ಲಿ ಇರುವುದನ್ನು ಹಂಚಿ ತಿನ್ನುವುದು ಮಾನವೀಯ ಕಾರ್ಯವಾಗಿದೆ. ಎಲ್ಲಾ ಉಳ್ಳವರಲ್ಲೂ ಉದಾರತೆ ಇರುವುದಿಲ್ಲ. ಪತ್ರಕರ್ತ ಹಾಗೂ ಉದ್ಯಮಿ ಗೋಪಾಲ್‌ಯಡಗರೆ ಅವರು ತೊಂದರೆಯಲ್ಲಿರುವವರಿಗೆ ನೆರವು ನೀಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ವಾರ್ತಾಧಿಕಾರಿ ಶಫಿ ಸಾದುದ್ದೀನ್ ಹೇಳಿದರು.
ಅವರು ಗುರುವಾರ ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಜಿ.ಆರ್.ಎಂಟರ್‌ಪ್ರೈಸಸ್‌ನ ಆವರಣದಲ್ಲಿ ವಿವಿಧ ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡುವ ಸಂಕಷ್ಟದಲ್ಲಿರುವ ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಕೊರೊನಾ ಸಂಕಷ್ಟ ಕಾಲದಲ್ಲಿ ಪತ್ರಿಕೋದ್ಯಮ ಕ್ಷೇತ್ರ ಸಮಸ್ಯೆಯಲ್ಲಿದೆ. ಪತ್ರಿಕಾ ವಿತರಕರು ಸಿಬ್ಬಂದಿಗಳಿಗೆ ನೆರವು ನೀಡಿರುವುದು ಅಭಿನಂದನೀಯ ಕಾರ್ಯ ಎಂದು ಹೇಳಿದರು.
ಗೋಪಾಲ್ ಯಡಗೆರೆ ಮಾತನಾಡಿ, ಮಗಳ ಜನ್ಮದಿನದಂದು ಸಂಕಷ್ಟದಲ್ಲಿರುವವರಿಗೆ ನೆರವು ನೀಡಬೇಕೆಂಬ ಉದ್ದೇಶವಿತ್ತು. ಇದೊಂದು ಅನೌಪಚಾರಿಕ ಕಾರ್ಯಕ್ರಮವಾಗಿದ್ದು, ತೊಂದರೆಯಲ್ಲಿರುವ ಸಹೋದ್ಯೋಗಿಗಳಿಗೆ ಸಹಾಯ ಮಾಡುವುದು ದರ್ಮ ಎನ್ನಿಸಿ ೪೦ ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್ ನೀಡುತ್ತಿರುವುದಾಗಿ ಹೇಳಿದರು. ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಒಬ್ಬ ಯಶಸ್ವಿ ಪತ್ರಕರ್ತ, ಬರಹಗಾರರಾಗಿರುವ ಗೋಪಾಲ್ ಯಶಸ್ವಿ ಉದ್ಯಮಿಯಾಗಿ ಕೊರೊನ ಸಂಕಷ್ಟ ಸಂದರ್ಭದಲ್ಲಿ ನೆರವಾಗುತ್ತಿರುವುದು ಮಾದರಿ ಕೆಲಸ ಎಂದು ಹೇಳಿದರು. ಹಿರಿಯ ಪತ್ರಕರ್ತರಾದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಹುಲಿಮನೆ ತಿಮ್ಮಪ್ಪ, ನಾಗರಾಜ್ ನೇರಿಗೆ, ಚಂದ್ರಹಾಸ್ ಹಿರೇಮಳಲಿ, ಶಾಂತಕುಮಾರ್, ಜೇಸುದಾಸ್ ಪಿ, ರಾಜೇಶ್ ಕಾಮತ್, ವೈದ್ಯ, ಜಿ.ಆರ್. ಎಂಟರ್ಪ್ರೈಸಸ್ ವ್ಯವಸ್ಥಾಪಕರಾದ ಲತಾ ಯಡಗೆರೆ, ಮ್ಯಾನೇಜರ್ ಸುರೇಶ್, ಮುರಳಿಧರ್, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ಶರಾವತಿ  ಸಂತ್ರಸ್ತರ ವಿಶ್ವಾಸಕ್ಕೆ ಪಕ್ಷಗಳ ಪೈಪೋಟಿ
ಅಡಕೆ ಎಲೆಚುಕ್ಕಿ ರೋಗ,  ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳೇ ಚುನಾವಣೆ ವಿಷಯ

Malenadu Mirror Desk

ಮಲೆನಾಡಿನಾದ್ಯಂತ ಶ್ರದ್ದಾಭಕ್ತಿಯ ಭೂಮಿ ಹುಣ್ಣಿಮೆ ಹಬ್ಬ , ಗರ್ಭವತಿ ಭೂ ತಾಯಿಯ ಬಯಕೆ ತೀರಿಸಿದ ರೈತ ಸಮುದಾಯ

Malenadu Mirror Desk

ಡಿಸೆಂಬರ್ ಹೊತ್ತಿಗೆ ವಿಮಾನ ಹಾರಾಟ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹಂತಕ್ಕೆ: ಸಂಸದರಿಂದ ಮಾಹಿತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.