ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ 195 ಮಂದಿಯಲ್ಲಿ ಕೊರೊನ ಸೋಂಕು ಪತ್ತೆಯಾಗಿದೆ. 5 ಮಂದಿ ಸಾವಿಗೀಡಾಗಿದ್ದು, 724 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ937ಕ್ಕೇರಿದೆ.
ಶಿವಮೊಗ್ಗ ತಾಲೂಕಿನಲ್ಲಿ 87 ಸೋಂಕು ತಗುಲಿದೆ. ಭದ್ರಾವತಿಯಲ್ಲಿ 54, ತೀರ್ಥಹಳ್ಳಿಯಲ್ಲಿ 16,ಶಿಕಾರಿಪುರದಲ್ಲಿ 11, ಸಾಗರದಲ್ಲಿ 6,ಹೊಸನಗರ 8,ಸೊರಬದಲ್ಲಿ 6 ಹಾಗೂ ಇತರೆ ಜಿಲ್ಲೆಯ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 3158 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ
previous post
next post