Malenadu Mitra
ರಾಜ್ಯ

ಚಾನಲ್ ದಂಡೆ ಒಡೆದು ಜಮೀನು ಜಲಾವೃತ : ರೈತರ ಆಕ್ರೋಶ

ರಿಪ್ಪನ್‍ಪೇಟೆ;-ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೇರ್ಲಿಗೆ ಗ್ರಾಮದ ಇತಿಹಾಸ ಪ್ರಸಿದ್ದ ಹೊಗಳಿಕಮ್ಮ ಕೆರೆಗೆ ಹರಿದು ಹೋಗುವ ಕೆರೆಯ ಚಾನಲ್ ದಂಡೆ ಒಡೆದು ಹಲವು ಭೂ ಪ್ರದೇಶ ಜಲಾವೃತಗೊಂಡು ಅಪಾರ ಬೆಳೆ ಹಾನಿಯಾಗಿದೆ ಎಂದು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾನಲ್ ಒಡೆದ ಪರಿಣಾಮ ಕೆರೆಯ ಅಚ್ಚುಕಟ್ಟು ರೈತರ ಸುಮಾರು 50 ಎಕರೆ ಭೂ ಪ್ರದೇಶದಲ್ಲಿನ ಕಬ್ಬು ಅಡಿಕೆ ಬಾಳೆ ಇನ್ನಿತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಕಳೆದ ವರ್ಷವೂ ಸಹ ಕೆರೆಯ ಚಾನಲ್ ಒಡೆದಿದ್ದರಿಂದಾಗಿ ಹೆಕ್ಟೇರ್‍ಗಟ್ಟಲೆ ಭತ್ತಬೆಳೆ ಇನ್ನಿತರ ಬೆಳೆಗಳು ಸಹ ನೀರುಪಾಲಾಗಿದ್ದರೂ ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಲಾದರೂ ಗಮನಹರಿಸದಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಕೆರೆ ದಂಡೆ ಒಡೆದಿದ್ದರಿಂದಾಗಿ ಈ ಭೂ ಪ್ರದೇಶದಲ್ಲಿ ಈ ವರ್ಷದಲ್ಲಿ ಭತ್ತ ನಾಟಿ ಮಾಡುವುದು ಕಷ್ಟಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರಾದ ಷಣ್ಮುಖಪ್ಪ ಮತ್ತು ಗುರುರಾಜ್, ರೈತ ನಾಗರೀಕರು ಜನಪ್ರತಿನಿದಿಗಳಿಗೆ ಮತ್ತು ಗ್ರಾಮಾಡಳಿತಕ್ಕೆ ಮನವಿ ಮೂಲಕ ಚಾನಲ್ ದುರಸ್ಥಿಗೆ ಒತ್ತಾಯಿಸಿದ್ದಾರೆ.

Ad Widget

Related posts

ಕೆಪಿಟಿಸಿಎಲ್ ಅಸಹಕಾರ ನೋಡಲ್ ಅಧಿಕಾರಿ ಅಮಾನತಿಗೆ ಶಿಫಾರಸು

Malenadu Mirror Desk

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Malenadu Mirror Desk

ಮಿಟ್ಲಗೋಡು ಕಾಡಿನ ಕೊಲೆ ರಹಸ್ಯ ಬಯಲು ಹೆಂಡತಿ, ಮಕ್ಕಳೇ ಮುಹೂರ್ತವಿಟ್ಟವರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.