ಶಿವಮೊಗ್ಗನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಮೀನು ಮಾರ್ಕೇಟ್ ಸುತ್ತಮುತ್ತ ಲಸಿಕಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಮೀನು ಮಾರ್ಕೇಟಿನ ಸುತ್ತಮುತ್ತ ಇರುವ ಅಂಗಡಿಗಳಲ್ಲಿ ಮತ್ತು ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್.ರಮೇಶ್, ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಎಲ್ಲಾರೂ ತಪ್ಪದೇ ಪಡೆದುಕೊಳ್ಳಬೇಕು. ಕರೋನಾ ಸೋಂಕಿನಿಂದ ದೂರ ಉಳಿಯಲು ಇದು ನಿಜವಾದ ಮದ್ದು. ಈ ಬಗ್ಗೆ ಮೌಡ್ಯತೆಯನ್ನು ಬಿಟ್ಟು ಗಾಳಿ ಸುದ್ದಿಗೆ ಕಿವಿಗೊಡದೆ ಲಸಿಕೆ ಹಾಕಿಸಿಕೊಳ್ಳಿ ಎಂದರು.
ನಗರ ಕಾಂಗ್ರೆಸ್ ಅಲ್ಪಾಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮ್ಮದ್ ನಿಹಾಲ್ ಮಾತನಾಡಿ, ಶಿವಮೊಗ್ಗ ನಗರವನ್ನು ಕರೋನಾ ಮುಕ್ತ ಹಾಗೂ ಮಾಸ್ಕ್ ಮುಕ್ತ ನಗರವನ್ನಾಗಿ ಮಾಡಬೇಕು. ನಾವೆಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳ್ಳೊಣ್ಣ. ನಮ್ಮ ಜೀವ ಜೀವನ ಎರಡು ಮುಖ್ಯ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ನೇತಾಜಿ ಮಾತನಾಡಿ, ಕೇಲವರು ಭಯದಿಂದ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಅನೇಕ ಬಾರಿ ಇದು ಪ್ರಾಣಕ್ಕೆ ಕುತ್ತಾಗಬಹುದು. ಮುನಚ್ಚರಿಕೆ ಅತಿ ಅಗತ್ಯ. ಎಲ್ಲಾ ಸಮಾಜದ ಯುವಕರು, ಮುಖಂಡರು, ಸಂಘ ಸಂಸ್ಥೆಗಳು ಮುಂದೆ ಬಂದು ಜನರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಗಲ್ಲಿ ಗಲ್ಲಿಗಳಲ್ಲಿ, ಮೊಹಲ್ಲಗಳಲ್ಲಿ ಇರುವ ಜನರಲ್ಲಿ ಅರಿವು ಮೂಡಿಸೋಣ ಎಂದು ಕರೆ ನೀಡಿದರು.
ಅಲ್ಪಾ ಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಮಹಮ್ಮದ್ ಆರೀಫ್ ಪ್ರಮುಖರಾದ ಮಧುಸೂದನ್, ಕೆ.ಚೇತನ್, ಸಯ್ಯದ್ ಮಜದ್ ಜಾವೀದ್, ಕಲೀಂ ಪಾಶ, ಆಸೀದ್, ಮಹಮ್ಮದ್ ಹುಸೇನ್, ಅಬ್ದುಲ್ ಸೇರಿದಂತೆ ಹಲವರಿದ್ದರು.
previous post