Malenadu Mitra
ರಾಜ್ಯ ಶಿವಮೊಗ್ಗ

ಶೋಷಿತರಿಗೆ ದನಿ ನೀಡಿದ ಸಿದ್ದಲಿಂಗಯ್ಯ: ಕುವೆಂಪು ವಿವಿಯಲ್ಲಿ ನುಡಿನಮನ

ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದಲ್ಲಿ ಖ್ಯಾತ ಕವಿ, ನಾಟಕಕಾರ, ಸಂಶೋಧಕರು, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಸಿದ್ದಲಿಂಗಯ್ಯ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ವೆಬಿನಾರ್ ಮೂಲಕ ಹಮ್ಮಿಕೊಂಡಿತ್ತು. ಆಶಯನುಡಿಗಳನ್ನಾಡಿದ ಕನ್ನಡ ಭಾರತಿಯ ಪ್ರಾಧ್ಯಾಪಕರಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಸಿದ್ದಲಿಂಗಯ್ಯ ಸಾಮುದಾಯಿಕ ಸಂವೇದನೆಯಿಂದ ರೂಪುಗೊಂಡ ಕವಿ. ಅವರ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ನೊಂದವರ ಪರ ಧ್ವನಿ ಇದೆ ಎಂದು ತಿಳಿಸಿದರು. ೭೦, ೮೦ರ ದಶಕದಲ್ಲಿ ಸಾಹಿತ್ಯದ ಮೂಲಕ ಚಳುವಳಿಯನ್ನು ರೂಪಿಸುವಾಗ ತಮ್ಮ ಸೂಕ್ಷ್ಮ ಸಂವೇದನೆಯ ಮೂಲಕ ಅದಕ್ಕೆ ಬೇಕಾದ ಶಕ್ತಿಯನ್ನು ಸಾಹಿತ್ಯದ ಮೂಲಕ ಒದಗಿಸಿದರು ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾರತಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಸಿದ್ದಲಿಂಗಯ್ಯ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮೋಹನ್ ಚಂದ್ರಗುತ್ತಿ ಮಾತನಾಡಿ ಸೈದ್ಧಾಂತಿಕ ಭಿನ್ನತೆ ಇರುವ ಕಡೆ ನಮ್ಮ ವಿಷಯಗಳನ್ನು ಗಟ್ಟಿಯಾಗಿ ಹೇಳಬೇಕು ಎಂದ ಸಿದ್ದಲಿಂಗಯ್ಯ ಅವರ ಮಾತನ್ನು ಸ್ಮರಿಸಿದರು. ಡಾ. ಎಸ್.ಎಂ. ಮುತ್ತಯ್ಯ ಅವರು ಮಾತನಾಡಿ ಈ ಸಮಾಜದ ಮೌಢ್ಯಗಳ ಬಗ್ಗೆ ಇದ್ದ ಆಕ್ರೋಶವನ್ನು ಸಿದ್ದಲಿಂಗಯ್ಯ ಸಾಹಿತ್ಯದಲ್ಲಿ ವ್ಯಕ್ತಮಾಡಿದ್ದರು ಎಂದು ಹೇಳಿದರು. ಡಾ. ಶುಭ ಮರವಂತೆ, ಸಿದ್ದಲಿಂಗಯ್ಯ ಅವರ ಸಾಹಿತ್ಯ ಹೊಂದಿದ ಬದ್ಧತೆಯ ಕುರಿತು ಮಾತನಾಡಿದರು. ಸಿದ್ದಲಿಂಗಯ್ಯ ಯಾಕೆ ಜನರ ನಡುವಿನ ಕವಿಯಾಗುತ್ತಾರೆ ಎಂಬುದರ ಕುರಿತು ಡಾ. ಹಾಲಮ್ಮ ಮಾತನಾಡಿದರು.

ಡಾ.ಪ್ರಕಾಶ್ ಮರ್ಗನಳ್ಳಿ ಮಾತನಾಡಿ, ಸಿದ್ದಲಿಂಗಯ್ಯ ಅವರ ಮೇಲೆ ಉಂಟಾದ ಪ್ರಭಾವಗಳು ಮತ್ತು ಅವರು ಕವಿಯಾಗಿ ರೂಪುಗೊಂಡ ಸಂದರ್ಭದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಭಾರತಿಯ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ.ಪುರುಷೋತ್ತಮ್ ಎಸ್. ವಿ. ನಿರೂಪಿಸಿದರು. ತಿಪ್ಪೇಸ್ವಾಮಿ ಹೋರಾಟ ಗೀತೆಗಳನ್ನು ಹಾಡಿದರು. ಡಾ. ನವೀನ್ ಮಂಡಗದ್ದೆ ಸ್ವಾಗತಿಸಿದರು. ಡಾ. ರವಿನಾಯಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಹವಹಿಸಿದ್ದರು.

ಎಲ್ಲರೊಂದಿಗೆ ಬೆರೆಯುತ್ತಿದ್ದ, ಕಿರಿಯರನ್ನು ಪ್ರೋತ್ಸಾಹಿಸುತ್ತಿದ್ದ ಸಿದ್ದಲಿಂಗಯ್ಯ ಅವರ ಗುಣ ಬಹಳ ದೊಡ್ಡದು. ಆ ಕಾರಣದಿಂದಾಗಿಯೇ ಅವರ ಅಗಲಿವಿಕೆ ದೊಡ್ಡ ಆಘಾತವನ್ನು ಉಂಟುಮಾಡಿದೆ

ಪ್ರೊ. ಪ್ರಶಾಂತ್ ನಾಯಕ್, ಕನ್ನಡ ಭಾರತಿಯ ನಿರ್ದೇಶಕರು


Ad Widget

Related posts

ಕಲ್ಲು ಎತ್ತಿಹಾಕಿ ಉದ್ಯಮಿ ಕೊಲೆ, ಕಲ್ಲೂರು ಮಂಡ್ಲಿ ತೋಟದಲ್ಲಿ ನಡೆದ ಘಟನೆ

Malenadu Mirror Desk

ಶಿವಮೊಗ್ಗದಲ್ಲಿ 14ಸಾವು,663ಮಂದಿಗೆ ಸೋಂಕು

Malenadu Mirror Desk

ಬಿಎಸ್‌ವೈ ಅವರಿಂದ ಬಿರುಸಿನ ಮತಬೇಟೆ ಸಾಗರ , ಸೊರಬದಲ್ಲಿ ಮಿಂಚಿನ ಸಂಚಾರ ಹಾಲಪ್ಪ, ಕುಮಾರ್ ಸಾಥ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.