ಉತ್ತಮ ಮುಂಗಾರು ಮಳೆಯಿಂದಾಗಿ ತುಂಬಿದ ತುಂಗಾ ಮೇಲ್ದಂಡೆ ಜಲಾಶಯದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ತುಂಗಾನದಿಗೆ ಬಾಗಿನ ಸಮರ್ಪಿಸಿದರು.
ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಮುಂಜಾಣೆಯೇ ಗಾಜನೂರಿಗೆ ಬಂದು ಪೂರೋಹಿತರು ಆಯೋಜಿಸಿದ್ದ ಗಂಗಾಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ಪತ್ನಿ ಸಮೇತರಾಗಿ ನದಿಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಅವರು, ತುಂಗಾ ಜಲಾಶಯ ತುಂಬಿರುವುದರಿAದ ಭೂಮಿ ಹಸನು ಮಾಡಲು, ನಾಟಿ, ಗೊಬ್ಬರ ಹಾಕಲು ಅನುಕೂಲವಾಗಿದೆ. ದೇವರ ದಯೆಯಿಂದ ಒಳ್ಳೆ ಮಳೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಗನ್ನಿಶಂಕರ್, ಪಾಲಿಕೆ ಸದಸ್ಯರಾಗ ಚನ್ನಬಸಪ್ಪ, ಜ್ಞಾನೇಶ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಭಾಗವಹಿಸಿದ್ದರು.