ವೀಕೆಂಡ್ ಕರ್ಫ್ಯೂ ಉಲ್ಲಂಘನೆ, ಪುಂಡಾಟ ಮಾಡಿದವರಿಗೆ ಪೋಲಿಸರಿಂದ ಪಾಠ
ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪೊಲೀಸ್ ಠಾಣೆ ಆವರಣದಲ್ಲೆ ಮಿಡ್‌ನೈಟ್ ಡ್ರಿಲ್ ಮಾಡಿ, ವಾರ್ನ್ ಮಾಡಿದ್ದಾರೆ.
ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡರು.
ಅಲೆದಾಟಕ್ಕೆ ಬ್ರೇಕ್
ಕೋಟೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಬಿ.ಹೆಚ್.ರಸ್ತೆ, ಸಹ್ಯಾದ್ರಿ ಕಾಲೇಜು ಬಳಿ, ಎಂಆರ್‌ಎಸ್ ಸರ್ಕಲ್ ಸೇರಿದಂತೆ ವಿವಿಧೆಡೆ ವಾಹನ ತಪಾಸಣೆ ನಡೆಸಿದರು. ಈ ವೇಳೆ ಅನಾವಶ್ಯಕವಾಗಿ ಓಡಾಡುತ್ತಿದ್ದವರನ್ನು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಇದರಲ್ಲಿ ಬಹುತೇಕ ಯುವಕರೆ ಇದ್ದರು.
ಮಿಡ್ ನೈಟ್ ಡ್ರಿಲ್
ಕೋಟೆ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರು ಬಂಧಿತರಿಗೆ ಕ್ಲಾಸ್ ತೆಗೆದುಕೊಂಡರು. ಕರ್ಫ್ಯೂ ನಿಯಮ, ಅದನ್ನು ಉಲ್ಲಂಘಿಸಿದರೆ ಆಗುವ ಪರಿಣಾಮದ ಬಗ್ಗೆ ವಿವರಿಸಿದರು. ಬಳಿಕ ನಿಯಮ ಉಲ್ಲಂಘಿಸಿದವರಿಗೆ ಪೊಲೀಸ್ ಠಾಣೆ ಆವರಣದಲ್ಲೇ, ನಡುರಾತ್ರಿಯಲ್ಲೆ ಡ್ರಿಲ್ ಮಾಡಿಸಲಾಯಿತು.
ನಿಯಮ ಉಲ್ಲಂಘಿಸಿದವರ ಕಾರು, ಬೈಕುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಮಾಡಿದವರಿಗೆ ಕೇಸ್ ಹಾಕಲಾಯಿತು.
ಕೋಟೆ ಠಾಣೆ ಮತ್ತು ಡಿಎಅರ್ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.