ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ರೈಲು ಹತ್ತುವಾಗ ಜಾರಿಬಿದ್ದ ಯುವಕನ ಕೈ ಮತ್ತು ಕಾಲು ತುಂಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಕವಚೂರು ಗ್ರಾಮದ ನವೀನ(18) ಗಾಯಗೊಂಡ ದುರ್ದೈವಿ. ತಾಳಗುಪ್ಪ-ಬೆಂಗಳೂರು ರೈಲು ಹತ್ತುವಾಗ ಈ ದುರ್ಘಟನೆ ನಡೆದಿದೆ. ಮಳೆಯಿಂದಾಗಿ ರೈಲ್ವೆ ನಿಲ್ದಾಣದಲ್ಲಿ ಜಾರಿಕೆ ಇದ್ದುದರಿಂದ ನವೀನ್ ರೈಲು ಹತ್ತುವಾಗ ಬಿದ್ದಿದ್ದಾನೆ.ಇದೇ ಸಂದರ್ಭ ರೈಲು ಸಾಗಿದೆ ಎನ್ನಲಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
previous post
next post