Malenadu Mitra
ರಾಜ್ಯ ಶಿವಮೊಗ್ಗ

ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿಜೆಡಿಎಸ್ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್, ವಿದ್ಯುತ್, ರಸಗೊಬ್ಬರ ಹಾಗೂ ದಿನ ನಿತ್ಯದ ವಸ್ತುಗಳ ಬೆಲೆಗಳನ್ನು ಏರಿಸಿರುವುದನ್ನು ಖಂಡಿಸಿ ಮಾಜಿ ಶಾಸಕಿ ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಘಟಕದ ಜೆಡಿಎಸ್ ಕಾರ್ಯಕತರು  ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಲಾಕ್‌ಡೌನ್ ನಿಂದ ಸಂಕಷ್ಟದಿಂದ ಜನರು ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಜನಸಾಮಾನ್ಯರ, ರೈತರ ಮತ್ತು ಕೂಲಿ ಕಾರ್ಮಿಕರ ಹಾಗೂ ದೀನ ದಲಿತರ ಬದುಕಿನ ಮೇಲೆ ಬರೆ ಏಳೆಯುವಂತೆ ಬೆಲೆಗಳನ್ನು ಗಗನಕ್ಕೇರಿಸಿದ್ದು, ಈ ಬೆಲೆ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಲ್ಲಿನ ಕುಟುಂಬದ ಮುಖ್ಯಸ್ಥರು, ದುಡಿಯುವ ವ್ಯಕ್ತಿಗಳು ಸಾವನಪ್ಪಿ ಕುಟುಂಬಗಳು ನಿರ್ಗತಿಕರಾಗಿ ಬೀದಿ ಪಾಲಾಗಿದ್ದಾರೆ. ಅಲ್ಲದೇ ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿಗಳು ಮರಣ ಹೊಂದಿ ಎಳೆ ಮಕ್ಕಳು ಅನಾಥ ರಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ರೈತರ ಸಮುದಾಯ ತಾನು ಬೆಳೆದ ಆಹಾರ ಸಾಮಾಗ್ರಿ, ತರಕಾರಿ ಮತ್ತು ಹಣ್ಣು ಹಂಪಲು ಕಟಾವು ಮಾಡಿ ಅದನ್ನು ಸಾಗಿಸಲು ಮತ್ತು ಮಾರಾಟ ಮಾಡಲು ವರ್ತಕರು ಮುಂದೆ ಬರದೇ ಇರುವುದರಿಂದ ಪಸಲನ್ನು ಕೊಳೆಯಲು ಬಿಟ್ಟು ನಿರ್ಗತಿಕರಾಗಿದ್ದಾರೆ. ಇತಂಹ ಸಮಯ ದಲ್ಲಿ ಬೆಲೆ ಏರಿಕೆಯನ್ನು ಗಗನಕ್ಕೇರಿಸಿ ಆ ವರ್ಗದವರ ಜನ ಜೀವನ ಅಸ್ತವ್ಯಸ್ಥ ಮಾಡಿದೆ ಎಂದು ಆಕ್ರೋಶ ವ್ಯಕ್ತಪ ಡಿಸಿದರು.

ತೈಲ ಬೆಲೆ ಏರಿಕೆಯಿಂದ ರಾಜ್ಯದ ಜನತೆ ನರಳುತ್ತಿರುವ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ವಿಮರ್ಶಿಸಿ ದರ ಏರಿಕೆಯನ್ನು ಹಿಂಪಡೆ ಯಬೇಕು. ಕರೋನಾ ಸೋಂಕಿನಿಂದ ೧ ಮತ್ತು2ನೇ ಅಲೆಯಲ್ಲಿ ಮೃತರಾದ ಹಾಗೂ ಬಡತನ ರೇಖೆ ಕೆಳಗೆ ಬರುವ ಮೃತ ವ್ಯಕ್ತಿಗಳು ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವು ದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಮೃತ ವ್ಯಕ್ತಿಗಳ ಕುಟುಂಬಗಳಿಗೆ ಯಾವುದೇ ಷರತ್ತು ಮತ್ತು ತಾರತಮ್ಯವಿಲ್ಲದೇ ಪ್ರತಿ ಕುಟುಂಬಕ್ಕೆ5 ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಗ್ರಾಮಾಂತರ ಜೆಡಿಎಸ್ ಕಾಯಾಧ್ಯಕ್ಷ ಕಾಂತರಾಜ್, ಎಪಿಎಂಸಿ ಸದಸ್ಯ ಎಸ್.ಎನ್.ಮಹೇಶ್, ದಾದಾಪೀರ್, ಕುಮಾರನಾಯ್ಕ್, ಗೀತಾಸತೀಶ್, ನಾರಾಯಣಪುರ ಕುಮಾರ ನಾಯ್ಕ್, ಸತೀಶ್‌ಗೌಡ, ಸುರೇಶ್, ಪ್ರಭಾಕರ್ ಬಾರಂಗಿ ಇನ್ನಿತರರು ಭಾಗವಹಿಸಿದ್ದರು.

Ad Widget

Related posts

ನಮ್ಮ ಹಾಡು, ನಮ್ಮ ಹಸೆ, ಜನಮನ ಸೆಳೆದ ದೀವರ ಸಾಂಸ್ಕೃತಿಕ ವೈಭವ

Malenadu Mirror Desk

ತುಮಕೂರು-ಶಿವಮೊಗ್ಗ ಚತುಷ್ಪಥ ಹೆದ್ದಾರಿ: 6397 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ

Malenadu Mirror Desk

ಜಾತಿಗಣತಿ ವರದಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ, ಅ.30 ಕ್ಕೆ ಶಿವಮೊಗ್ಗಕ್ಕೆ ಸಿದ್ದರಾಮಯ್ಯ ಆಗಮನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.