Malenadu Mitra
ರಾಜ್ಯ ಶಿವಮೊಗ್ಗ

ಕೊರೊನ ಸಂಕಷ್ಟದಲ್ಲಿ ವೈದ್ಯರ ಸೇವೆ ಅನನ್ಯವಾದುದು

ಕೋವಿಡ್ ಪರಿಸ್ಥಿತಿ ಎದುರಿಸಲು ಎಲ್ಲಾ ಕೊರೋನಾ ವಾರಿಯರ್ಸ್ ಗಳೊಂದಿಗೆ ನ್ಯಾಯಾಂಗ ಇಲಾಖೆ ಕೂಡ ಅನೇಕ ರೀತಿಯಲ್ಲಿ ಶ್ರಮಪಟ್ಟಿದೆ. ಅದರಲ್ಲೂ ಔಐದ್ಯರು ತಮ್ಮ ಕುಟುಂಬವನ್ನೇ ಪ್ರಾಣದ ಹಂಗು ತೊರೆದು ಸ್ಪಂದಿಸಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಹೇಳಿದರು.
ಅವರು ಶಿವಮೊಗ್ಗನಗರದ ರೋಟರಿ ಪೂರ್ವ ಶಾಲೆಯ ಸಭಾಂಗಣದಲ್ಲಿ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಕೊರೋನಾ ನಿಯಂತ್ರಣಕ್ಕಾಗಿ ಶ್ರಮಿಸಿದ ವೈದ್ಯರುಗಳನ್ನು ಮತ್ತು ಸೇವೆ ನೀಡುವ ಸಂದರ್ಭದಲ್ಲಿ ಮೃತಪಟ್ಟ ವೈದ್ಯರ ಕುಟುಂಬದವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳಲ್ಲಿ ಲೋಪದೋಷಗಳಾದಾಗ, ವೈಫಲ್ಯ ಕಂಡಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನಿರ್ದೇಶನ ನೀಡಿದ್ದು, ನಮಗೆಲ್ಲ ತಿಳಿದಿದೆ. ಆಡಳಿತಕ್ಕೆ ನ್ಯಾಯಾಂಗ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಲಹೆ, ಸೂಚನೆ ನೀಡುತ್ತಾ ಬಂದಿದೆ. ವೈದ್ಯರು ನಿರಂತರವಾಗಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳು ಕೂಡ ನಡೆದಿದೆ. ಆದರೂ, ತಾಳ್ಮೆ ಕಳೆದುಕೊಳ್ಳದೇ ಸಂಕಷ್ಟದ ಸ್ಥಿತಿಯಲ್ಲಿ ವೈದ್ಯರು ಅಮೂಲ್ಯ ಸೇವೆ ನೀಡಿದ್ದಾರೆ ಎಂದರು.

ಡಾ. ಶಿವರಾಮಕೃಷ್ಣ ಮಾತನಾಡಿ, ರೋಗಿಗಳು ಮತ್ತು ವೈದ್ಯರು ಪರಸ್ಪರ ವಿಶ್ವಾಸದಿಂದ ಇದ್ದಾಗ ಮಾತ್ರ ಚಿಕಿತ್ಸೆ ಫಲಕಾರಿಯಾಗುತ್ತದೆ. ಒಬ್ಬರು ವಿಶ್ವಾಸ ಕಳೆದುಕೊಂಡರೂ ಕೂಡ ಅಲ್ಲಿ ಸಮಸ್ಯೆ ಸೃಷ್ಠಿಯಾಗುತ್ತದೆ. ಸವಾಲಿನ ಸಂದರ್ಭದಲ್ಲಿ ವೈದ್ಯರು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಂಬಂಧಿಕರು ಕೂಡ ಆತಂಕಕ್ಕೆ ಒಳಗಾಗದೇ ಸಹನೆಯಿಂದ ವರ್ತಿಸಬೇಕು. ಮನುಷ್ಯ ಹಿಂಸೆ, ಕೋಪ ಎಲ್ಲವನ್ನು ಬಿಟ್ಟು ಸಮಸ್ಯೆಯ ಬಗ್ಗೆ ತಾಳ್ಮೆಯಿಂದ ಆಲೋಚಿಸಿದಾಗ ವೈದ್ಯರು ಕೂಡ ಮುಕ್ತವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.

ಕೋವಿಡ್ ನಿಂದ ಮೃತಪಟ್ಟ ವೈದ್ಯರಾದ ಡಾ. ಮಲ್ಲೇಶ್ ಹುಲ್ಲಮನಿ ಅವರ ಪತ್ನಿ ಡಾ. ಶಶಿಕಲಾ ಹಾಗೂ ಡಾ. ಈಶ್ವರಪ್ಪನವರ ಪುತ್ರ ಡಾ. ಪ್ರೀತಂ, ಡಾ. ಶ್ರೀಧರ್, ಡಾ. ಶಿವರಾಮಕೃಷ್ಣ, ಐಎಂಎ ಜಿಲ್ಲಾಧ್ಯಕ್ಷ ಡಾ. ಪರಮೇಶ್ವರ್, ಡಾ. ಶಂಭುಲಿಂಗ, ಡಾ. ಅರುಣ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ವೈ.ಕೆ. ಸೂರ್ಯನಾರಾಯಣ್, ರೋಟರಿ ವಿಜಯಕುಮಾರ್, ಯೋಗಗುರು ರುದ್ರಾರಾಧ್ಯ, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಕೆ.ಸಿ. ಬಸವರಾಜ್, ಪದ್ಮನಾಭ್, ದಿಲೀಪ್ ನಾಡಿಗ್ ಇದ್ದರು.

Ad Widget

Related posts

ರಾಜರತ್ನನಿಗೆ ಶಿವಮೊಗ್ಗ ಜನರ ಭಾವುಕ ನಮನ, ಸದ್ಭಾವನ ಟ್ರಸ್ಟ್ ನಿಂದ ಯಶಸ್ವೀ ಅಪ್ಪು-ಅಮರ ಕಾರ್ಯಕ್ರಮ

Malenadu Mirror Desk

67 ವರ್ಷದ ಮನೆಗಳ್ಳನ ಬಂಧನ !

Malenadu Mirror Desk

ಶಿವಮೊಗ್ಗ ಎಫ್.ಎಂ.-90.8 ಸಮುದಾಯ ರೇಡಿಯೋ ಕೇಂದ್ರ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.