Malenadu Mitra
ರಾಜ್ಯ ಶಿವಮೊಗ್ಗ

ಕಾಂಗ್ರೆಸ್‍ನ ಪಂಚಕೌರವರಿಂದ ಕುರ್ಚಿ ಕನಸು

ಬಿಜೆಪಿ ಒಳಗಿನವರೂ ಪಕ್ಷ ಟೀಕಿಸುತ್ತಿದ್ದಾರೆ: ಕೆಎಸ್.ಈಶ್ವರಪ್ಪ

ಕಾಂಗ್ರೆಸ್‍ನಲ್ಲಿ ಪಂಚ ಕೌರವರಿದ್ದು ಅವರೆಲ್ಲರೂ ಈಗ ಮುಖ್ಯಮಂತ್ರಿ ರೇಸ್‍ನಲ್ಲಿದ್ದಾರೆ. ಇವರಿಗೆ ಮಾನ ಮರ್ಯದೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ತಾವೇ ಮುಖ್ಯಮಂತ್ರಿ ಎಂದು ಹೇಳಿಕೆ ಕೊಡಿಸುತ್ತಿದ್ದಾರೆ. ವ್ಯಕ್ತಿಪೂಜೆ ಇಲ್ಲ ಎಂದು ಹೇಳುತ್ತಲೇ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರನ್ನು ಚೂ ಬಿಟ್ಟಿದ್ದಾರೆ. ದಲಿತ ಸಿಎಂ ಎಂದು ಪರಮೇಶ್ವರ್, ಅಲ್ಪಸಂಖ್ಯಾತ ಸಿಎಂ ಎಂದು ತನ್ವೀರ್ ಸೇಠ್ ಹೀಗೆ ತರಾವರಿ ಹೇಳಿಕೆ ನೀಡುತ್ತಿದ್ದಾರೆ ಜನರಿಂದತಿರಸ್ಕೃತರಾದ ಈ ವ್ಯಕ್ತಿಗಳು ಈಗಲೇ ಇಲ್ಲದ ಕನಸು ಕಾಣುತಿದ್ದಾರೆ ಇದು ಆ ಪಕ್ಷದ ಅವನತಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಎಲ್ಲಾ ಟೀಕೆಗಳ ನಡುವೆಯೂ ಬಿಜೆಪಿ ತನ್ನ ಸಿದ್ಧಾಂತದ ಮೂಲಕ ದಿನದಿನಕ್ಕೂ ಬಲವಾಗುತ್ತಿದೆ. ಇದು ಸಂಸ್ಕೃತಿ ಬೆಳೆಸುವ ಪಕ್ಷ ಇದರ ಚಟುವಟಿಕೆ ನಿರಂತರವಾಗಿರುತ್ತದೆ. ಇಲ್ಲಿನ ಕಾರ್ಯಕರ್ತರು ಸಿದ್ಧಾಂತದ ತಳಹದಿಯ ಮೇಲೆ ಚಟವಟಿಕೆ ಮಾಡುತ್ತಿದ್ದಾರೆ. ಕೊರೊನ ಇರಲಿ ಹೋಗಲಿ, ಮುಖ್ಯಮಂತ್ರಿ ಬದಲಾಗಲಿ, ಬದಲಾಗದಿರಲಿ ಈ ಯಾವ ಸಂಗತಿಯೂ ನಮ್ಮ ಕಾರ್ಯಕರ್ತರಿಗೆ ಮುಖ್ಯವಲ್ಲ. ಅವರು ನಿರಂತರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬರುತ್ತಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಆಗಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಹೇಳಿದರು
ಮುಖ್ಯಮಂತ್ರಿ ಬದಲಾವಣೆ ಆಗೇ ಹೋಯಿತು ಎಂದು ಪ್ರತಿಪಕ್ಷಗಳು ಹುಯಿಲೆಬ್ಬಿಸಿದವು ಆದರೆ ಅದೂ ಯಾವುದೂ ಆಗುವುದಿಲ್ಲ. ಉತ್ತರ ಪ್ರದೇಶದಲ್ಲಿಯೂ ಯೋಗಿ ಆದಿತ್ಯನಾಥ್ ಬದಲಾವಣೆ ಎಂದು ಕೂಗಾಟ ಎದ್ದಿತ್ತು ಆದರೆ ಈಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅವರು ಪಕ್ಷವನ್ನು ಗೆಲ್ಲಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಗಿರೀಶ್ ಪಟೇಲ್, ಚನ್ನಬಸಪ್ಪ ಮತ್ತಿತರರು ಭಾಗವಹಿಸಿದ್ದರು.

ಹಿಂದೆ ಬಿಜೆಪಿಯನ್ನು ಹೊರಗಿನವರು ಟೀಕೆ ಮಾಡುತ್ತಿದ್ದರು. ಆದರೆ ಇಂದು ಪಕ್ಷದ ಒಳಗಿನವರೇ ಟೀಕೆ ಮಾಡುವಂತಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದಿರುವವರ ಸಂಖ್ಯೆ ಕಡಿಮೆ ಇದೆ. ಅವರು ಟೀಕೆ ಮಾಡಲಿ ಪಕ್ಷ ನೋಡಿಕೊಳ್ಳುತ್ತದೆ. ಇದ್ಯಾವುದರ ಹಂಗಿಲ್ಲದ ಕಾರ್ಯಕರ್ತರು ತಮ್ಮ ಪಾಡಿಗೆ ಪಕ್ಷ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ
ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು.

Ad Widget

Related posts

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ತಿಳಿಸಬೇಕು
ಪುನಶ್ಚೇತನ ಕಾರ್ಯಾಗಾರದಲ್ಲಿ ಉಪನಿರ್ದೇಶಕ ಕೃಷ್ಣಪ್ಪ ಸಲಹೆ

Malenadu Mirror Desk

ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ : ಸಾವು

Malenadu Mirror Desk

ಸಾಮೂಹಿಕ ನಾಯಕತ್ವ: ಶಾ ಹೇಳಿಕೆಗೆ ಈಶ್ವರಪ್ಪ ತದ್ವಿರುದ್ಧ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.