ಕೊರೊನಾ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವ ಬಗ್ಗೆ ತಪ್ಪು ಕಲ್ಪನೆ ತೊರೆದು ಜೀವ ರಕ್ಷಣೆಗೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ.ಜ್ಞಾನೇಶ್ ಹೇಳಿದರು.
ಸೊರಬ ತಾಲೂಕಿನ ತವನಂದಿ ಗ್ರಾಮದಲ್ಲಿ ಸೊರಬ ರೋಟರಿ ಕ್ಲಬ್ ಹಾಗು ರಿಲಯನ್ಸ್ ಫೌಂಡೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ತವನಂದಿ ಗ್ರಾಮ ವಿಶೇಷವಾಗಿದ್ದು, ಹೋರಾಟಗಳಲ್ಲಿ ಗುರುತಿಸಿಕೊಂಡಿದೆ ಎಂದ ಅವರು ಕೊರೊನಾ ಮೂರನೇ ಅಲೆ ಆರಂಭವಾಗುವ ಮೊದಲು ಜಾಗೃತಿ ಹೊಂದುವ ಅಗತ್ಯವಿದೆ. ರೋಟರಿ ಕ್ಲಬ್ ಕೊರೊನಾ ಕಾಲದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿದೆ ಎಂದರು.
ಗ್ರಾಮದ ಮುಖಂಡ ಹಾಗೂ ವಕೀಲ ಎಂ.ಡಿ.ಶೇಖರ್ ಮಾತನಾಡಿ, ತವನಂದಿ ದೊಡ್ಡ ಗ್ರಾಮವಾಗಿದ್ದು, ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿದ್ದಲ್ಲದೆ ಎರಡು ಸಾವಾಗಿದ್ದವು. ಇದನ್ನು ಗುರುತಿಸಿ ಮೂರನೇ ಅಲೆಗೆ ಜಾಗೃತಿ ಮೂಡಿಸಲು ಉಚಿತವಾಗಿ 2500 ಮಾಸ್ಕ್ ವಿತರಿಸಿದ್ದು ಸಂತಸದ ಸಂಗತಿ ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ಅಣ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಟರಿ ಕ್ಲಬ್ ಸದಸ್ಯ ಮಂಜುನಾಥ್ ತವನಂದಿ ಪ್ರಾಸ್ತಾವಿಕ ಮಾತನಾಡಿದರು.
ರೋಟರಿ ಕ್ಲಬ್ ನಿಟಕಪೂರ್ಪ ಅಧ್ಯಕ್ಷ ರಾಜು ಹಿರಿಯಾವಲಿ ಸ್ವಾಗತಿಸಿ, ಕಾರ್ಯದರ್ಶಿ ಯಶೋಧರ್ ನಿರೂಪಿಸಿದರು.
ವಲಯ ಸಂಯೋಜಕ ನಾಗರಾಜ್ ಗುತ್ತಿ, ರಿಲಯನ್ಸ್ನ ರಮೇಶ್ ದೊಡ್ಡೇರಿ, ನಿವೃತ್ತ ಶಿಕ್ಷಕ ಮಂಜಪ್ಪ ಮಾಸ್ತರ್ ಮಾತನಾಡಿದರು.
ಸಮಾಜ ಸೇವಕ ವೇಣುಗೋಪಾಲ್, ಕೃಷ್ಣಪ್ಪ ಓಟೂರು, ಡಿ.ಎಸ್.ಶಂಕರ್, ಈರೇಶ್ ಮೇಸ್ತ್ರಿ, ಚಂದ್ರಶೇಖರ್, ಮನೋಹರ್ ಮತ್ತಿತರರಿದ್ದರು.
previous post
next post