ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಸತ್ತವರ ಸಂಖ್ಯೆ ಸಾವಿರ ತಲುಪಿದೆ. ಕೊರೊನ ಎರಡೂ ಅಲೆಯಲ್ಲಿ ಈವರೆಗೆ ಸತ್ತವರ ಸಂಖ್ಯೆ ಒಂದು ಸಾವಿರ ತಲುಪಿದೆ. ಇದು ಆರೋಗ್ಯ ಇಲಾಖೆ ಬಿಚ್ಚಿಟ್ಟ ಮಾಹಿತಿ. ಬಚ್ಚಿಟ್ಟ ಮತ್ತು ಇಲಾಖೆ ಗಮನಕ್ಕೂ ಬಾರದ ಸಾವುಗಳು ಇದರಲ್ಲಿ ಸೇರಿಲ್ಲ.
ಶಿವಮೊಗ್ಗದಲ್ಲಿ ಮಂಗಳವಾರ,97ಮಂದಿಯಲ್ಲಿ ಕೊರೊನ ಸೋಂಕು ಪತ್ತೆಯಾಗಿದ್ದು, 3 ಮಂದಿ ಸಾವಿಗೀಡಾಗಿದ್ದಾರೆ. 113ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ1000ಕ್ಕೇರಿದೆ.
ಶಿವಮೊಗ್ಗ ತಾಲೂಕಿನಲ್ಲಿ 36ಮಂದಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 24, ತೀರ್ಥಹಳ್ಳಿಯಲ್ಲಿ 7,ಶಿಕಾರಿಪುರದಲ್ಲಿ 3, ಸಾಗರದಲ್ಲಿ 15,ಹೊಸನಗರ 4 ಸೊರಬದಲ್ಲಿ1,ಇತರೆ ಜಿಲ್ಲೆ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ856 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ
previous post