ಆ ಹುಡುಗ ಮನಸು ಮಾಡಿದ್ದರೆ ಯವುದಾದರೂ ಒಂದು ಒಳ್ಳೆ ಕೆಲಸವನ್ನೇ ಪಡೆಯಬಹುದಿತ್ತು. ಆದರೆ ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ ಹಿನ್ನೀರ ಸಂತ್ರಸ್ತರಾಗಿದ್ದೇವೆ.ಈಗ ಊರಿಗೆ ಬೆಳಕು ಕೊಡುವ ಲೈನ್ ಮ್ಯಾನ್ ಕೆಲಸವೇ ಸಾಕು ಎಂದು ಖುಷಿಯಿಂದ ಲೈನ್‍ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆದರೆ ಐಯಾಮ್ ಪವರ್ ಮ್ಯಾನ್ ಎಂದು ಕರ್ತವ್ಯ ನಿಷ್ಠೆ ತೋರುತ್ತಿದ್ದ ಆತನ ಕಂಡು ಅಸೂಯೆ ಪಟ್ಟ ವಿಧಿ ತನ್ನ ಬಳಿ ಕರೆದುಕೊಂಡು ಬಿಟ್ಟಿತು.
ಇದು ಸಾಗರ ತಾಲೂಕು ಸುಳ್ಳಳ್ಳಿಯ ಜಯೇಂದ್ರ ಜೈನ್ (30)ಕರುಣಾಜನಕ ಕತೆ. ಸಾಗರದ ಪ್ರಥಮ ದರ್ಜೆ ಕಾಲೇಜು ಹಿಂಬಾಗ ವಿದ್ಯುತ್ ಲೈನ್ ರಿಪೇರಿಮಾಡುತ್ತಿದ್ದಾಗ 11 ಕೆವಿ ಲೈನ್‍ನಲ್ಲಿ ಪ್ರವಹಿಸಿದ ವಿದ್ಯುತ್ ತಾಗಿ ಜಯೇಂದ್ರ ಸಾವಿಗೀಡಾಗಿದ್ದಾನೆ. ಶಾಲಾ ಕಾಲೇಜು ದಿನಗಳಿಂದ ಚುರುಕಾಗಿದ್ದ ಜಯೇಂದ್ರ ತಾನೇ ಬಯಸಿ ಕೆಇಬಿ ಲೈನ್‍ಮೆನ್ ಹುದ್ದೆಯಲ್ಲಿ ಮುಂದುವರಿದಿದ್ದ ಎನ್ನಲಾಗಿದೆ. ಊರಿಗೆ ಬೆಳಕು ಕೊಡುವ ನಾನು ಪವರ್ ಮೆನ್ ಎಂದು ಹೆಮ್ಮೆಯಿಂದ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದ ಆತ ತಾನು ಪ್ರೀತಿಸುತ್ತಿದ್ದ ಕರ್ತವ್ಯ ನಿರ್ವಹಿಸುವಾಗಲೇ ಅಕಾಲಿಕ ಮರಣಕ್ಕೀಗಿದ್ದಾನೆ.
ದುಡಿಯುವ ಮಗನನ್ನು ಕಳೆದುಕೊಂಡು ಅತನ ಕುಟುಂಬ ಬಡವಾಗಿದೆ. ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಜಯೇಂದ್ರನಿಗೆ ಚಿಕ್ಕ ಮಗುವಿದೆ. ಉತ್ಸಾಹಿ ತರುಣನಾಗಿದ್ದ ಆತನನ್ನು ಕಳೆದುಕೊಂಡ ಮಿತ್ರವರ್ಗ ಹತಾಶವಾಗಿದೆ. ಚುರುಕಾಗಿದ್ದ ಜಯೇಂದ್ರನನ್ನು ಕಳೆದುಕೊಂಡ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಮೇಲಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅನ್ಯಾಯದ ಸಾವಾಗಿದೆ ಎಂಬ ಆರೋಪ ಸ್ಥಳೀಯರಾಗಿದೆ.ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ.
ಕಿತ್ತುಕೊಳ್ಳಲೇಬೇಕೆಂದಿದ್ದರೆ ಕೊಡುವುದಾದರೂ ಏಕೆ..
ಹೇ ವಿಧಿಯೆ ನೀನೆಷ್ಟು ಕ್ರೂರಿ..ಸಾವು ಎಂದಾದರೊಂದುದಿನ ಬರುವಂತದ್ದೇ. ಆದರೆ ಇಷ್ಟು ಬೇಗವೇ.. ಆ ತಾಯಿ ಅಷ್ಟು ಎತ್ತರಕ್ಕೆ ಆ ಮಗನನ್ನು ಬೆಳೆಸಲು ಎಷ್ಟು ಕಷ್ಟಪಟ್ಟಿರಬಹುದು.. ಅವನನ್ನೇ ನಂಬಿ ಬಂದ ಹೆಣ್ಣಿನ ಗತಿಯೇನು.. ಆ ಮಗುವಿಗೆ ಏನು ಉತ್ತರಿಸಬೇಕು…
ಜಯೇಂದ್ರ ನೀನೇನೋ ಬಾರದ ಊರಿಗೆ ಪ್ರಯಾಣ ಬೆಳೆಸಿದೆ. ನಿನ್ನೊಂದಿಗೆ ಮೂರು ವರ್ಷ ಜೊತೆಗೆ ಓದಿದ ನೆನಪುಗಳು ಕಾಡುತ್ತಿವೆ.. ನಾವು ಆಡಿದ ಆಟ. ನಿನ್ನ ಅಕ್ಷರದ ನೆನಪು. ನೀನು ತರಗತಿಯಲ್ಲೇ ಓದುವುದರಲ್ಲಿ ಮುಂಚೂಣಿ. ಎಲ್ಲ ನೋಟ್‍ಗಳನ್ನೂ ನಿನ್ನೊಂದಿಗೆ ಪಡೆದು ಬರೆದದ್ದು ಇನ್ನೂ ಹಸಿಯಾಗೆ ಇದೆ.. ನಿನ್ನ ಹೆಂಡತಿ ಕೂಡಾ ನನ್ನ ಗೆಳತಿಯೇ… ಇಷ್ಟು ಅನ್ಯಾಯ ಮಾಡುವುದು ಸರಿಯೇ.. ದೇವರೇ ಕಿತ್ತುಕೊಳ್ಳುವುದಾದರೆ ಹೆಮ್ಮರವಾದ ಮೇಲೆಯೇ ಕಿತ್ತುಕೊಳ್ಳಬೇಕೇ… ಹೀಗೆ ನೋವುನೀಡುವುದೇ ನಿನಗೆ ಹಿತವೇ…
—ಜಯೇಂದ್ರನ ಸಹಪಾಠಿ ಫೇಸ್‍ಬುಕ್‍ನಲ್ಲಿ ಬರೆದ ನೋವಿನ ನುಡಿಗಳು
ಕರುಣೆ ಬಾರದೇ ಭಗವಂತ
ಕಾರಣ ಹೇಳದೇ ಹೋದೆ ಅನ್ನಬೇಕೋ..? ವಿಧಿ ಇಷ್ಟು ಕ್ರೂರಿ ಅಂತ ಬೈಯಬೇಕೋ ಗೊತ್ತಾಗ್ತಾ ಇಲ್ಲ ಅಣ್ಣ… ಒಟ್ಟಲ್ಲಿ ಇವತ್ತು ನಮ್ಮನ್ನ, ನಿನ್ನ ಕುಟುಂಬವನ್ನ ಬಿಟ್ಟು ಕಾಣದೇ ಇರೋ ಊರಿಗೆ ಹೋಗಿಬಿಟ್ಟೆ…..! ಹೇಗೇ ಹೇಳಲಿ ನಾನು ನಿನ್ನಾತ್ಮಕ್ಕೆ ಶಾಂತಿ ಸಿಗಲಿ ಅಂತ ಇಷ್ಟು ಚಿಕ್ಕ ವಯಸ್ಸಿಗೆ ಹೋದಾಗ……?
ಮನೆ ತುಂಬಾ ನಗು- ಮನಸು ತುಂಬ ಸಂತೋಷ,ಪ್ರೀತಿ ಹೊತ್ತು ಸಾಗೋ ನಿಮ್ಮ ಕುಟುಂಬ ನೋಡಿ ಯಮರಾಜನೇ ಬಂದು ನಿನಗೂ ಅರಿವಿಲ್ಲದೇ ಹೊತ್ತೋಯ್ದು ಬಿಟ್ಟನೇ ಅನಿಸುತಿದೆ…….!
ಹಸುಳೆ ಕಂದನಿಗೆ ಅಪ್ಪನೆಂಬ ಅರಸನ ನಗು ಬೇಡವೇ ಹೇಳು….! ಹೊಟ್ಟೆ ಉರಿಸುವಷ್ಟು ಪ್ರೀತಿಸಿ ಅವಳನ್ನ ವರಿಸಿದೆ, ಅವಳ ಪ್ರೀತಿಯ ಕಂಡು ಹೊತ್ತೊಯ್ದನೆ.? ಎನ್ನಬೇಕೋ ಕಾಣೇ, ಅವಳ ಅಳು ಕೇಳಿಯಾದರು ಎದ್ದು ಬಾ ಅಣ್ಣ.
-ಒಡನಾಡಿಯೊಬ್ಬರ ಶ್ರದ್ಧಾಂಜಲಿ