ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ತುಮರಿ ಮತ್ತು ಬ್ಯಾಕೋಡು ವ್ಯಾಪ್ತಿಒಯ ಬಡವರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭ ಮುಖಂಡರುಗಳಾದ ಸೋಮಶೇಖರ್ ಲ್ಯಾವಿಗೆರೆ, ಜಿ.ಟಿ.ಸತ್ಯನಾರಾಯಣ, ಗಂಟೆ ಹರೀಶ್, ಗಣಪತಿ ಮಂಡಗಳಲೆ, ಶ್ರೀಕಾಂತ್ ಕುರುವರಿ,ಸಂತೋಷ್ ಮತ್ತಿತರರು ಹಾಜರಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು 141 ಹೊಸ ಕೇಸ್‍ಗಳು ಪತ್ತೆಯಾಗಿವೆ. 3 ಮಂದಿ ಸಾವಿಗೀಡಾಗಿದ್ದು, ಈವರೆಗೆ ಕೋವಿಡ್‍ನಿಂದ ಸತ್ತವರ ಸಂಖ್ಯೆ 1009 ಕ್ಕೇರಿದೆ. 82 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 63, ಭದ್ರಾವತಿ 27,ತೀರ್ಥಹಳ್ಳಿ 8,ಶಿಕಾರಿಪುರ 5,ಸಾಗರ 19, ಹೊಸನಗರ 4 ,ಸೊರಬ 9 ಹಾಗೂ ಇತರೆ ಜಿಲ್ಲೆಯ 6 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಪ್ರಸ್ತುತ 958 ಸಕ್ರಿಯ ಪ್ರಕರಣಗಳಿವ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
previous post