ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿ ನೆಲ್ಲೂರಿನಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು ತಾಲ್ಲೂಕಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 110 ಲೀಟರ್ ಬೆಲ್ಲದ ಕೊಳೆ ಹಾಗೂ 20ಲೀಟರ್ ಕಳ್ಳಭಟ್ಟಿಯನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.
ಸಾಗರ ಉಪ ವಿಭಾಗದ ಅಬಕಾರಿ ಅಧೀಕ್ಷಕಿ ಡಿ.ಲೀಲಾವತಿ ಹಾಗೂ ಸೊರಬ ವಲಯ ಅಬಕಾರಿ ನಿರೀಕ್ಷಕ ಶ್ರೀನಾಥ್ ನೇತೃತ್ವದ ತಂಡ ದಾಳಿ ನಡೆಸಿ, ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಗ್ರಾಮದ ಬಲವೀಂದ್ರಪ್ಪ ಅವರ ಮನೆಯ ಹಿತ್ತಲಲ್ಲಿ ಕಳ್ಳಭಟ್ಟಿ ತಯಾರಿಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 110 ಲೀಟರ್ ಬೆಲ್ಲದ ಕೊಳೆ ಹಾಗೂ ಸೊರಬ ಪಟ್ಟಣದ ಪ್ರವೀಣ್ ಅವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 20 ಲೀಟರ ಬೆಲ್ಲದ ಕೊಳೆ ಹಾಗೂ 20ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕ ಅಣ್ಣಪ್ಪ, ರಾಮಪ್ಪ, ಬಾಲಚಂದ್ರ, ದೇವರಾಜ್, ಮಹಾಂತೇಶ್, ಪುಟ್ಟಪ್ಪ, ದೇವರಾಜ್, ಪುಟ್ಟಪ್ಪ, ಕಾಂತರಾಜ್ ಇದ್ದರು.
previous post
next post