ಸಾಗರದ ಹಾಲಿ ಹಾಗೂ ಮಾಜಿ ಶಾಸಕರುಗಳು ಗುರುವಾರ ಕರೂರು ಹಾಗೂ ಬಾರಂಗಿ ಹೋಬಳಿಯಲ್ಲಿ ಮಿಂಚಿನ ಸಂಚಾರ ನಡೆಸಿದರು. ಶಾಸಕ ಹಾಗೂ ಎಂ.ಎಸ್.ಐ.ಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಅವರು, ತುಮರಿ ಪಂಚಾಯಿತಿ ಆವರಣದಲ್ಲಿ ಕೊರೊನ ಸಂಕಷ್ಟದಿಂದ ಆರ್ಥಿಕ ನಷ್ಟ ಅನುಭವಿಸಿದ ಜನರಿಗೆ ಪಡಿತರ ಕಿಟ್ ವಿತರಿಸಿದರು. ಬಳಿಕ ಅವರು ತುಮರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲ್ಕಟ್ ಸೇತುವೆ ಕಾಮಗಾರಿ ವೀಕ್ಷಿಸಿದರು. ಇತ್ತೀಚೆಗೆ ಕೋವಿಡ್ ನಿಂದ ನಿಧನರಾದ ಕಿಡದುಂಬೆ ಲೋಹಿತ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ವಿದ್ಯುತ್ ತಂತಿ ತಗಲು ನಿಧನರಾಗಿದ್ದ ಜಯೇಂದ್ರ ಜೈನ್ ಹಾಗೂ ಹೃದಯಾಘಾತದಿಂದ ನಿಧನರಾಗಿದ್ದ ಮಿಂಚ ಗ್ರಾಮದ ಹರೀಶ್ ಮನೆಗೂ ಭೇಟಿ ನೀಡಿದ್ದ ಹಾಲಪ್ಪ ಅವರು ಅಕಾಲಿಕ ಮರಣಹೊಂದಿದ್ದ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಶಾಸಕರೊಂದಿಗೆ ಸ್ಥಳೀಯ ಮುಖಂಡರು ಹಾಜರಿದ್ದರು.
ಬೇಳೂರು ಅವರಿಂದ ದಿನಸಿ ಕಿಟ್ ಹಂಚಿಕೆ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ತುಮರಿ ಮತ್ತು ಬ್ಯಾಕೋಡು ವ್ಯಾಪ್ತಿಒಯ ಬಡವರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭ ಮುಖಂಡರುಗಳಾದ ಸೋಮಶೇಖರ್ ಲ್ಯಾವಿಗೆರೆ, ಜಿ.ಟಿ.ಸತ್ಯನಾರಾಯಣ, ಗಂಟೆ ಹರೀಶ್, ಗಣಪತಿ ಮಂಡಗಳಲೆ, ಶ್ರೀಕಾಂತ್ ಕುರುವರಿ,ಸಂತೋಷ್ ಮತ್ತಿತರರು ಹಾಜರಿದ್ದರು.