Malenadu Mitra
ರಾಜ್ಯ ಶಿವಮೊಗ್ಗ

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ (೪೪) ಹೃದಯಾಘಾತದಿಂದ ನಿಧನರಾಗಿದ್ದಾರೆ. ತನಿಖಾ ಪತ್ರಿಕೋದ್ಯಮದಲ್ಲಿ ನುರಿತ ಪತ್ರಕರ್ತರಾಗಿದ್ದ ಸುನೀಲ್, ಹಿರಿಯ ಪತ್ರಕರ್ತ ದಿ.ರವಿಬೆಳಗೆರೆ ಅವರ ಗರಡಿಯಲ್ಲಿ ಪಳಗಿ ಹಾಯ್‌ಬೆಂಗಳೂರು ಪತ್ರಿಕೆಯಲ್ಲಿ ತಮ್ಮ ಕ್ರೈಂ ವರದಿಗಾರಿಕೆಯಿಂದ ಪ್ರಖ್ಯಾತರಾಗಿದ್ದರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹುಟ್ಟೂರು ಹೆಗ್ಗರವಳ್ಳಿಯಲ್ಲಿರುವಾಗಲೇ ಹೃದಯಾಘಾತವಾಗಿದೆ. ತಕ್ಷಣ ಸಮೀಪದ ಗೋಣಿಬೀಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿತಾದರೂ ಚಿಕತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ರವಿ ಬೆಳಗೆರೆ ಸುಪಾರಿ ಕೇಸ್
ರವಿಬೆಳಗೆರೆಯವರ ಅಪ್ಪಟ ಶಿಷ್ಯರಾಗಿದ್ದ ಸುನೀಲ್ ಹಲವು ವರ್ಷಗಳ ಕಾಲ ಆಪ್ತರಾಗಿದ್ದರು. ಕೊನೆಗೆ ಕೌಟುಂಬಿಕ ಕಾರಣಕ್ಕಾಗಿ ಸುನೀಲ್ ಮೇಲೆ ಮುನಿಸಿಕೊಂಡಿದ್ದ ಬೆಳಗೆರೆ ಶಿಷ್ಯನನ್ನು ಹೊರಹಾಕಿದ್ದರು. ಸುನೀಲ್ ಅವರನ್ನು ಕೊಲೆ ಮಾಡಲು ರವಿಬೆಳೆಗೆರೆ ಅವರು ಸುಪಾರಿ ಕೊಟ್ಟಿದ್ದರೆಂಬ ಸುದ್ದಿ ರಾಜ್ಯದಲ್ಲಿ ಗಮನ ಸೆಳೆದು ದೂರು -ಪ್ರತಿದೂರು ದಾಖಲಾಗಿದ್ದವು. ಗೌರಿಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್.ಐ.ಟಿ ಗೆ ಈ ಸುಪಾರಿ ಪ್ರಕರಣದ ಸುಳಿವು ಸಿಕ್ಕಿತ್ತು. ಹಾಯ್‌ಬೆಂಗಳೂರಿನಿಂದ ಹೊರಬಂದಿದ್ದ ಸುನೀಲ್ ಹೆಗ್ಗರವಳ್ಳಿ ಅವರು, ಚಾರ್ಲಿ ಟೈಮ್ಸ್ ಪತ್ರಿಕೆ ನಡೆಸುತ್ತಿದ್ದರು.

Ad Widget

Related posts

ಭಾರತೀಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದ: ಪ್ರೊ.ಬಿ.ಪಿ.ವೀರಭದ್ರಪ್ಪ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಳ

Malenadu Mirror Desk

ಮಹಾ ಪಂಚಾಯತ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.