Malenadu Mitra
ರಾಜ್ಯ ಶಿವಮೊಗ್ಗ

ಲಂಬಾಣಿ ಭಾಷೆಗೆ ಲಿಪಿ :ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ

ಸಾವಿರಾರು ವರ್ಷಗಳ ಇತಿಹಾಸ ಇರುವ ಲಂಬಾಣಿ ಭಾಷೆಗೆ ಲಿಪಿಯ ಗೌರವ ತಂದುಕೊಡುವ ಕುರಿತು ತಜ್ಞರೊಂದಿಗೆ ಸಮಾಲೋಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ತಾಂಡದಲ್ಲಿ ಗುರುವಾರ ಲಂಬಾಣಿ ಜನಾಂಗದವರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಬಣಜಾರ ಸಮುದಾಯವರು ರಾಜ್ಯದಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲೂ ಇದ್ದಾರೆ. ಲಂಬಾಣಿ ಭಾಷೆಗೆ ಲಿಪಿಯ ಗೌರವ ತಂದುಕೊಡುವುದರಿಂದ ಅದನ್ನು ಮತ್ತಷ್ಟು ಶ್ರೀಮಂತಗೊಳಿಸುವ ಪ್ರಯತ್ನ ಮಾಡ ಲಾಗುವುದು ಎಂದು ಭರವಸೆ ನೀಡಿದರು.
ಈ ಭಾಗದಲ್ಲಿ ಹಲವು ವರ್ಷಗಳಿಂದ ಜೀವಂತ ವಾಗಿರುವ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಜನಾಂಗದವರಿಗೆ ಸವಲತ್ತು ಒದಗಿಸುವುದು, ಆರೋಗ್ಯ ಕೇಂದ್ರ, ಪ್ರೌಢಶಾಲೆ ಮತ್ತು ಇತರೆ ಬೇಡಿಕೆಗಳ ಪಟ್ಟಿಮಾಡಿಕೊಳ್ಳಲಾಗಿದೆ. ನಾವು ಅಧಿಕಾರದಲ್ಲಿ ಇಲ್ಲದೆ ಹೋದರೂ ಪ್ರತಿಪಕ್ಷದಲ್ಲಿ ನಿಮ್ಮ ಧನಿಯಾಗಿ ಸರಕಾರದ ಮೇಲೆ ಒತ್ತಡ ತಂದು ಇವೆಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಂಬಾಣಿ ಸಮುದಾಯದ ಸಾರ್ವತ್ರಿಕ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗುವುದು. ನಮ್ಮ ಸರಕಾರದಲ್ಲಿ ಇವೆಲ್ಲವನ್ನು ಖಂಡಿತ ಈಡೇರಿಸಲಾಗುವುದು ಎಂದರು.
ಇದಕ್ಕೂ ಮೊದಲು ಅವರು ಗ್ರಾಮಸ್ಥರ ಅಹವಾಲು ಗಳನ್ನು ಆಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಎಂಎಲ್‍ಸಿ ಆರ್.ಪ್ರಸನ್ನಕುಮಾರ್, ಮಾಜಿ ಸಚಿವ ಶಿವಮೂರ್ತಿ ನಾಯ್ಕ್, ಗ್ರಾಮ ಮುಖಂಡ ನಾಗೇಶ್ ನಾಯ್ಕ್ ಮತ್ತಿತರರು ಇದ್ದರು.

Ad Widget

Related posts

ಕುವೆಂಪು ವಿವಿ 31 ಮತ್ತು 32ನೇ ಘಟಿಕೋತ್ಸವ ಜೂ. 16 ರಂದು, ಶಂಕರಮೂರ್ತಿ ಸೇರಿ ಆರು ಮಂದಿಗೆ ಗೌರವ ಡಾಕ್ಟರೇಟ್

Malenadu Mirror Desk

ಮಾನವೀಯತೆ ಕಟ್ಟಿಕೊಡುವ ಶಿಕ್ಷಣದ ಅಗತ್ಯವಿದೆ ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಖ್ಯಾತನಂದ ಸ್ವಾಮೀಜಿ ಅಭಿಮತ

Malenadu Mirror Desk

ಕೋವಿಡ್ ಬಗ್ಗೆ ಮುಂಜಾಗರೂಕತಾ ಕ್ರಮ ಅಗತ್ಯ: ಸಚಿವ ಕೆ.ಕೆ.ಎಸ್. ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.