Malenadu Mitra
ರಾಜ್ಯ ಶಿವಮೊಗ್ಗ

ಪಶು ಆಹಾರ ಮತ್ತು ಮೇವಿನ ಅಚ್ಚು ತಯಾರಿಕಾ ಘಟಕ ಉದ್ಘಾಟನೆ

ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ನೂತನ ಜಾನುವಾರು ಸಾಕಾಣಿಕಾ ಸಂಕೀರ್ಣದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುದಾನದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಪಶು ಆಹಾರ ಮತ್ತು ಮೇವಿನ ಅಚ್ಚು (ಬ್ಲಾಕ್) ತಯಾರಿಕಾ ಘಟಕವನ್ನು ಜು.19 ರಂದು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‍ನ ಕುಲಪತಿಗಳಾದ ಪ್ರೊ.ಹೆಚ್.ಡಿ.ನಾರಾಯಣಸ್ವಾಮಿ ಇವರು ಉದ್ಘಾಟಿಸಿದರು.
ಪಶು ಆಹಾರ ಮತ್ತು ಮೇವಿನ ಅಚ್ಚು ತಯಾರಿಕೆ ತಂತ್ರಜ್ಞಾನವು ಜಾನುವಾರು, ಕುರಿ ಹಾಗೂ ಮೇಕೆ ಸಾಕಾಣಿಕೆದಾರರಿಗೆ ತುಂಬಾ ಉಪಯುಕ್ತವಾಗಿದ್ದು ಕಡಿಮೆ ಖರ್ಚಿನಲ್ಲಿ ಕೃಷಿ ಉಳಿಕೆಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಮೇವಿನ ಅಚ್ಚುಗಳನ್ನು ಗ್ರಾಮ ಮಟ್ಟದಲ್ಲೇ ತಯಾರಿಸಿಕೊಳ್ಳಬಹುದಾಗಿದೆ.
ಈ ಮೇವಿನ ಅಚ್ಚುಗಳನ್ನು ಸಾಗಾಟ ಮತ್ತು ದಾಸ್ತಾನು ಮಾಡುವುದು ಸಹ ಸುಲಭವಾಗಿದ್ದು ಜಾನುವಾರುಗಳಿಗೆ ದಿನವಿಡೀ ಪೋಷಕಾಂಶಭರಿತ ರುಚಿಕರವಾದ ಸಮತೋಲಿತ ಆಹಾರವನ್ನು ಒದಗಿಸುವುದರ ಮೂಲಕ ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆಯನ್ನು ಕಾಯ್ದುಕೊಳ್ಳಬಹುದಾಗಿದೆ.
ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾಲಕಾಲಕ್ಕೆ ಜಾನುವಾರು ಸಾಕಾಣಿಕೆ, ಮೇವು ಮತ್ತು ಆಹಾರ ಉತ್ಪಾದನೆ, ಆಹಾರ ವಿಶ್ಲೇಷಣೆ ಮುಂತಾದ ವಿಷಯಗಳ ಬಗ್ಗೆ ತರಬೇತಿ ಹಾಗೂ ಮಾಹಿತಿಯನ್ನು ನೀಡಲಾಗುವುದು. ರೈತರು ಹಾಗೂ ಹೈನು ಉದ್ದಿಮೆದಾರರು ಇದರ ಸದುಪಯೋಗ ಮಾಡಿಕೊಳ್ಳಬಹುದು ಎಂದು ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget

Related posts

ಚುನಾವಣೆ ದಿನ ಸಿಗಂದೂರಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಸರ್ವರೂ ಮತದಾನದಲ್ಲಿ ಭಾಗಿಯಾಗಿ: ಧರ್ಮದರ್ಶಿ ಡಾ.ರಾಮಪ್ಪ

Malenadu Mirror Desk

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.78.28 ಮತದಾನ

Malenadu Mirror Desk

ಮನೆ ತೆರವು ಕಾರ್ಯಾಚರಣೆ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ಪೊಲೀಸರ ನೆರವಿನೊಂದಿಗೆ ತೆರವಿಗೆ ಮುಂದಾದ ನೀರಾವರಿ ಇಲಾಖೆ: ಜೆಸಿಬಿಗೆ ಅಡ್ಡ ಮಲಗಿ ತೆರವಿಗೆ ಅಡ್ಡಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.