Malenadu Mitra
ಶಿವಮೊಗ್ಗ

ಕುಮಾರ್ ದುಂಡಾವರ್ತನೆ ಮರುಕಳಿಸಿದರೆ ತಕ್ಕ ಪಾಠ: ಮಧು ಎಚ್ಚರಿಕೆ


ಮನೆ ಮುರಿಯುವ ಸಂಸ್ಕøತಿಯನ್ನು ಚರಿತ್ರೆಯಾಗಿಸಿಕೊಂಡ ಕುಮಾರ್ ಬಂಗಾರಪ್ಪ ಅವರು ಸೊರಬ ಪಟ್ಟಣದ ಸರ್ವೆ ನಂ 113ರಲ್ಲಿ ವಾಸವಾದ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದ ಅವರ ಅಮಾನವೀಯ ಹಾಗೂ ದುರಾಡಳಿತಕ್ಕೆ ತಕ್ಕ ಪಾಠ ಕಲಿಸುವುದಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ಎಚ್ಚರಿಸಿದರು.
ಸೊರಬ ಪಟ್ಟಣದ ಕಾನಕೇರಿ ಬಡಾವಣೆಯ ಸರ್ವೆ ನಂ.113ರಲ್ಲಿ ಜುಲೈ 16ರಂದು ಪುರಸಭೆ ಹಾಗೂ ತಾಲೂಕು ಆಡಳಿತವು ಆಕಾಶ್ ನಾಯಕ್ ಅವರಿಗೆ ಸೇರಿದ ನಿವೇಶನದಲ್ಲಿ ನಿರ್ಮಾಣವಾದ ಮನೆಯನ್ನು ತೆರವುಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಸೋಮವಾರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರು ಕಾನಕೇರಿ ಬಡವಾಣೆಯ ಸರ್ವೆ ನಂ 113ರಲ್ಲಿ ವಾಸಿಸಿರುವ ಸುಮಾರು 2ಸಾವಿರ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಆಶ್ರಯ ನೀಡಿದ್ದರು. ಆದರೆ ಕುಮಾರ್ ಬಂಗಾರಪ್ಪ ಈ ಹಿಂದೆಯೂ ಶಾಸಕರಾಗಿದ್ದಾಗ ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದಾಗ ಬಂಗಾರಪ್ಪ ಅವರು ತಡೆದು ಬಡವರ ಪರವಾಗಿ ನಿಂತು ರಕ್ಷಣೆ ನೀಡಿದ್ದರು. ಅಂತಹ ಬಡವರಿಗೆ ವಸತಿ ಕಲ್ಪಿಸುವ ಬದಲು ಮನೆ ಉರುಳಿಸುವ ಕೆಲಸ ಮಾಡುತ್ತಿರುವುದು ಅವರನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ಮಾಡಿದ ಅವಮಾನವಾಗಿದೆ.
2017ರಲ್ಲಿ 94ಸಿಸಿ ಅಡಿಯಲ್ಲಿ ಅಕ್ರಮ, ಸಕ್ರಮ ಯೋಜನೆಯಲ್ಲಿ ನೂರಾರು ಜನರಿಗೆ ಸರ್ಕಾರದ ಶುಲ್ಕವನ್ನು ನನ್ನ ಕೈಯಿಂದ ತುಂಬಿ ನಿವೇಶನಕ್ಕೆ ಹಕ್ಕುಪತ್ರ ನೀಡಿದ ತೃಪ್ತಿ ನನಗಿದೆ. ಬಡವರ ಪರ ಕಾನೂನುಗಳಿದ್ದರೂ ಅಧಿಕಾರದ ಅಮಲಿನಿಂದ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಬೆಂಬಲಿಗರೊಂದಿಗೆ ಆಕಾಶ್ ಅವರ ಮನೆಯೊಳಗೆ ನುಗ್ಗಿ ಅವರನ್ನು ನಿಂದಿಸಿದ್ದಲ್ಲದೇ ಪೊಲೀಸ್ ಠಾಣೆಗೆ ಕರೆದೊಯ್ದು ಕಟ್ಟಡ ತೆರವುಗೊಳಿಸಲು ಮುಂದಾಗಿರುವುದು ಅವರ ದಂಡಾವರ್ತvನೆಗೆ ಸಾಕ್ಷಿಯಾಗಿದೆಂದು ಆರೋಪಿಸಿದರು.

ಶಾಸಕರ ಕೈಗೊಂಬೆ
ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರೆ ಅದನ್ನು ತೆರವುಗೊಳಿಸಲು ಅಧಿಕಾರಿಗಳು ಸಂಬಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿ, ಮಾಧ್ಯಮ ಪ್ರಕಟಣೆ ನೀಡಿ ಮುಂದಿನ ಕ್ರಮ ಜರುಗಿಸಬೇಕು. ಕಾನೂನು ಉಲ್ಲಂಘಿಸಿ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಬಡವರ ಮನೆಯ ಧ್ವಂಸ ಮಾಡಲು ಮುಂದಾಗಿರುವ ಕುಮಾರ್ ಬಂಗಾರಪ್ಪ ತಾವು ವಾಸವಾಗಿರುವ ದೊಡ್ಡ ಮನೆ ಯಾವ ಜಾಗದಲ್ಲಿ ಇದೆ ಎನ್ನುವುದನ್ನು ಅರಿಯಬೇಕು. ಅದೇ ಮನೆಗೆ ನನ್ನ ಅವಧಿಯಲ್ಲಿ ಹಕ್ಕುಪತ್ರ ನೀಡಿದ್ದೇನೆ. ಆ ಮನೆಯ ಮಾಲೀಕನಿಗೆ ಪ್ರತಿ ತಿಂಗಳು ಬಾಡಿಗೆ ನೀಡದೆ ಪುಕ್ಕಟೆ ವಾಸಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಎಸ್.ಬಂಗಾರಪ್ಪ ಅವರ ಆಶಯದಂತೆ ಆಕಾಶ್ ಅವರಿಗೆ ಉಂಟಾಗಿರುವ ನಷ್ಟವನ್ನು ತುಂಬಿಕೊಡುವುದಾಗಿ ಭರವಸೆ ನೀಡಿದರು.
• ಧ್ವಂಸಗೊಳಿಸಿದ ಮನೆಯನ್ನು ಪರಿಶೀಲಿಸಿದ ಮಧು ಬಂಗಾರಪ್ಪ 2 ಕಿ.ಮೀ ದೂರ ಸಾವಿರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆಯಲ್ಲಿ ಸಾಗಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಂದ ಘಟನೆ ಸಂಬಂಧ ಮಾಹಿತಿ ಪಡೆದು ತರಾಟೆ ತೆಗೆದುಕೊಂಡು ನಂತರ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ತಾಕೀತು ಮಾಡಿದ್ದಲ್ಲದೆ, ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೆ ಮನೆ ನುಗ್ಗಿದ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಬೆಂಬಲಿಗರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.



ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಕೆ.ಮಂಜುನಾಥ್, ತಬಲಿ ಬಂಗಾರಪ್ಪ, ರಾಜಶೇಖರ್ ಕುಪ್ಪಗಡ್ಡೆ, ವೈ.ಜಿ.ಪುಟ್ಟಸ್ವಾಮಿ, ಮೋಹನಗೌಡ, ಎಂ.ಡಿ. ಶೇಖರ್, ಎಚ್.ಗಣಪತಿ, ಕಲ್ಲಪ್ಪ, ಜಗದೀಶ್ ಕುಪ್ಪೆ, ಪರಶುರಾಮ ಸಣಬೈಲ್, ಫಯಾಜ್ ಅಹಮದ್, ಜಿ.ಪಂ ಮಾಜಿ ಸದಸ್ಯರಾದ ಶಿವಲಿಂಗೇಗೌಡ, ವಿರೇಶ್ ಕೊಟಗಿ, ಲೋಲಾಕ್ಷಮ್ಮ, ತಾ.ಪಂ ಸದಸ್ಯ ನಾಗರಾಜ್ ಚಿಕ್ಕಸವಿ, ನಾಗರಾಜ್ ಎನ್.ಜಿ, ಡಿಎಸ್‍ಎಸ್ ಮುಖಂಡ ಗುರುಮೂರ್ತಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು, ಡಿಎಸ್‍ಎಸ್ ಸಂಘಟನೆಯವರು, ಮಹಿಳೆಯರು ಪಾಲ್ಗೊಂಡಿದ್ದರು.

Ad Widget

Related posts

ಕಾಡಾನೆ ನಿಯಂತ್ರಣಕ್ಕೆ ಕ್ರಮ

Malenadu Mirror Desk

ರಾಜಧಾನಿಯಲ್ಲಿ ಮೊಳಗಿದ ಕುರುಬರ ಕಹಳೆ

Malenadu Mirror Desk

ಜನವಿರೋಧಿ ಸರಕಾರಗಳು: ಬಾಸೂರು ಚಂದ್ರೇಗೌಡ ಆರೋಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.