Malenadu Mitra
ಜಿಲ್ಲೆ ಶಿವಮೊಗ್ಗ

ಬಿಎಸ್ ವೈ ಬೆನ್ನಿಗೆ ಯುವಸಂಗಮ

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಬಿಜೆಪಿ ಪಕ್ಷಕ್ಕೆ ನಷ್ಟವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ವೀರಶೈವ ಯುವ ಸಂಗಮ ವೇದಿಕೆ  ಅಧ್ಯಕ್ಷ ಗಣೇಶ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ನಾಯಕತ್ವ ಬದಲಾವಣೆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.ಒಂದು ವೇಳೆ ಹೈಕಮಾಂಡ್ ಮಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬಲವಂತದಿಂದ ಇಳಿಸಿದರೆ ಪಕ್ಷದ ವರ್ಚಸ್ಸಿಗೆ ಹಾನಿಯಾಗಲಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಅಧಿಕಾರದ ಹೆಬ್ಬಾಗಿಲು ತೆರೆಸಿದವರನ್ನು ಆತುರಾತುರದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿದರೆ ಬೇರೆ ಸಂದೇಶ ಹೊಂದಂತಾಗುತ್ತದೆ ಎಂದ ಅವರು, ಸರ್ವಜನಾಂಗದ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಒಳ್ಳೆಯ ಆಡಳಿತ ನೀಡುತ್ತಿರುವ ಸಂದರ್ಭದಲ್ಲಿ ಅವರನ್ನು ಬದಲಾಯಿಸಿದರೆ ವೇದಿಕೆ ವಿರೋಧಿಸುತ್ತದೆ ಎಂದರು.
ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಶ್ಯಕತೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಸುರೇಶ್, ಎನ್. ಪರಮೇಶ್, ಉಮಾಶಂಕರ್, ಸುರೇಖಾ, ಅಭಿನಂದನ್, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ad Widget

Related posts

ಮೆಗ್ಗಾನ್ ಅವ್ಯವಸ್ಥೆ ಸರಿಪಡಿಸಲು ಪ್ರಗತಿಪರರ ಆಗ್ರಹ

Malenadu Mirror Desk

ಮಳೆನಾಡಾದ ಮಲೆನಾಡು, ಮೈದುಂಬುತ್ತಿರುವ ನದಿಗಳು

Malenadu Mirror Desk

ಈಶ್ವರಪ್ಪರಿಗೆ ಸರಕಾರಿ ನೌಕರರ ಹೊಟ್ಟೆ ಮೇಲೇಕೆ ಕಣ್ಣು ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.