ರಿಪ್ಪನ್‍ಪೇಟೆ;-ಎಡಬಿಡದೆ ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದಾಗಿ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲುವಳ್ಳಿ ಅವಳಿಕಲ್ಲುಕೆರೆ ತುಂಬಿ ಕೂಡಿ ಬಿದ್ದಿದ್ದು ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರಿಫ್ ಇವರ ನೇತೃತ್ವದಲ್ಲಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ಗ್ರಾಮಪಂಚಾಯ್ತಿ ಸದಸ್ಯೆ ಹೂವಮ್ಮ ರಾಮಪ್ಪ,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ,ಟೇಕೇಶಪ್ಪ,ಈರಪ್ಪ ಇನ್ನಿತರ ಗ್ರಾಮಸ್ಥರು ಮುತ್ತೈದೆಯರು ಪಾಲ್ಗೊಂಡು ಗಂಗಾಮಾತೆಗೆ ವಿಶೇಷ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಗವಟೂರು ಚಾನಲ್ ದಂಡೆ ಒಡೆದು ನಾಟಿ ಮಡಿ ನಾಶ
ಸಮೀಪದ ಗವಟೂರು ಗ್ರಾಮದ ತಾವರೆಕೆರೆ ಕೂಡಿ ನೀರು ಹರಿದು ಹೋಗುವ ಚಾನಲ್ ದಂಡೆ ಒಡೆದು ನಾಟಿ ಸಸಿ ಮಡಿ ಜಲಾವೃತಗೊಂಡಿರುವ ಘಟನೆ ನಡೆದಿದೆ.
ಕಳೆದ ಮೂರು ನಾಲ್ಕುದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಗವಟೂರು ತಾವರೆಕೆರೆ ನೆವಟೂರು
ಅನೆಕೆರೆ,ತಳಲೆಯ ಹೆಗ್ಗರೆ,ಬರುವೆಯ ಬೆಟ್ಟನಕೆರೆ,ಕೆಂಚನಾಲದ ಕೆರೆ ಬೆನವಳ್ಳಿ ಅರಸಾಳು ವಿವಿಧ ಗ್ರಾಮಗಳಲ್ಲಿನ ಕೆರೆಗಳು ತುಂಬಿ ಕೂಡಿ ಬಿದ್ದು ನೀರು ಹರಿಯಲಾರಂಭಿಸಿದ್ದು ಹಲವುಕಡೆಯಲ್ಲಿ ಜಮೀನುಗಳು ಜಲಾವೃತಗೊಂಡಿವೆ
previous post
next post