ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಅವರ ತಂದೆ ಮರಿಮಾದಯ್ಯ(80 ವರ್ಷ) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.
ಶನಿವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಹರಕೆರೆಯ ನಿವಾಸದಲ್ಲಿ ಅವರು ಇಹಲೋಕ ತ್ಯಜಿಸಿದರು. ಶನಿವಾರ ಮಧ್ಯಾಹ್ನ3 ಗಂಟೆ ಹೊತ್ತಿಗೆ ಮಂಡ್ಲಿ ಸಮೀಪದ ಹಿಂದೂ ರುದ್ರಭೂಮಿಯಲ್ಲಿ ಮರಿಮಾದಯ್ಯವರ ಅಂತ್ಯಕ್ರಿಯೆ ನಡೆಯಿತು.
ಮೃತರು ಪತ್ನಿ ನಾಗಮ್ಮ, ಮಕ್ಕಳಾದ ಎಂ.ಶ್ರೀಕಾಂತ್, ಸುನಿಲ್, ಮಧು ಮತ್ತು ಅನಿತಾ ಹಾಗೂ ಮೊಮ್ಮಕ್ಕಳು ಸೇರಿದಂತೆ ಬಂಧು, ಬಳಗವನ್ನು ಅಗಲಿದ್ದಾರೆ.
ಸಂತಾಪ
ಮರಿಮಾದಯ್ಯ ನಿಧನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ, ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಎಸ್. ಮಧು ಬಂಗಾರಪ್ಪ, ಶಾರಾದ ಪೂರ್ಯನಾಯ್ಕ್, ಜಿ.ಡಿ. ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಸಂತಾಪ ಸೂಚಿಸಿದ್ದಾರೆ.