ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವಯಸ್ಸಿನ ಅಜೆಂಡಾವನ್ನು ಪರಿಗಣಿಸದೆ ಅರೋಗ್ಯವಾಗಿರುವ ಈ ಇಳಿವಯಸ್ಸಿನಲ್ಲಿಯೂ ರಾಜ್ಯದ ಸರ್ವಾಂಗೀಣಾ ಅಭಿವೃದ್ದಿಗೆ ಶ್ರಮಿಸುತ್ತಿರುವ ಇವರಿಗೆ ಅವಧಿ ಪೂರ್ಣ ಅಧಿಕಾರ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಗೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟೀಲ್‍ರಿಗೆ ಮನವಿ ಮೂಲಕ ರಿಪ್ಪನ್‍ಪೇಟೆ ಶಿವಮಂದಿರ ಶ್ರೀಬಸವೇಶ್ವರ ವೀರಶೈವ ಸಮಾಜದವರು ಆಗ್ರಹಿಸಿದ್ದಾರೆ.
ರಿಪ್ಪನ್‍ಪೇಟೆಯಲ್ಲಿ ಭಾನುವಾರ ಶಿವಮಂದಿರದಲ್ಲಿ ವೀರಶೈವ ಸಮಾಜ ಭಾಂದವರು ತುರ್ತು ಸಭೆ ನಡೆಸಿ ಶಿವಮಂದಿರದ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರನಿಗೆ ತಾಕೀತು ಮಾಡಿದರು. ಅಲ್ಲದೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗಿಳಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಶಿವಮೊಗ್ಗ ಜಿಲ್ಲೆಯ ಹುಟ್ಟುಹೋರಾಟಗಾರ ಜನಪ್ರಿಯ ನಾಯಕ ಸಂಘಟನಾ ಚತುರರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಧಿಪೂರ್ಣ ಅಧಿಕಾರ ನೀಡುವಂತೆ ಸಭೆಯಲ್ಲಿ ಒಕ್ಕೂರಲ ನಿರ್ಣಾಯ ಕೈಗೊಳ್ಳಲಾಯಿತು.
ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ವಯಸ್ಸು ಗಣನೆಗೆ ತೆಗೆದುಕೊಳ್ಳದೆ ಅವರ ಅರೋಗ್ಯ ಮತ್ತು ಜನಪರ ಕಾಳಜಿಯನ್ನು ಪರಿಗಣಿಸುವಂತೆ ಸಭೆಯಲ್ಲಿ ಒಕ್ಕೂರಲ ನಿರ್ಧಾರ ಕೈಗೊಂಡು ಪ್ರಧಾನ ಮಂತ್ರಿ ಮೋದಿಜೀ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಗೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟೀಲ್‍ರಿಗೆ ಮನವಿಯಲ್ಲಿ ಕೊರೋನಾ ಮತ್ತು ಅತಿವೃಷ್ಠಿಯ ಸಂಕಷ್ಟದಲ್ಲಿಯೂ ದೈರ್ಯವಾಗಿ ಸಮರ್ಥ ಅಡಳಿತ ನಿರ್ವಹಿಸಿರುವ ಹೋರಾಟದ ಜನನಾಯಕನಿಗೆ ಅವಧಿಪೂರ್ಣ ಅಧಿಕಾರ ನೀಡುವಂತೆ ರಿಪ್ಪನ್‍ಪೇಟೆ ಶಿವಮಂದಿರ ಶ್ರೀಬಸವೇಶ್ವರ ವೀರಶೈವ ಸಮಾಜದವರು ಆಗ್ರಹಿಸಿದ್ದಾರೆ.
ಶಿವಮಂದಿರ ಶ್ರೀಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ.ಕೆ.ಬಿ.ಕಮಲಾಕ್ಷರಪ್ಪ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‍ಗೌಡ,ಎಂ.ಅರ್.ಶಾಂತವೀರಪ್ಪಗೌಡ,ಬೆಳಕೋಡು ಹಾಲಸ್ವಾಮಿಗೌಡರು,ಡಿ.ಸಿ.ಈಶ್ವರಪ್ಪ,ಟಿ.ಮೃತ್ಯುಂಜಯ,ಡಿ.ಎಸ್.ರಾಜಾಶಂಕರ್,
ಡಿ.ಸಿ.ಮುರುಗೇಶಪ್ಪಗೌಡ,ಎಲ್.ವೈ.ದಾನೇಶಪ್ಪ,ಹೆಚ್.ವಿ.ಈಶ್ವರಪ್ಪ,ನೆವಟೂರು ಈಶ್ವರಪ್ಪಗೌಡ(ಸ್ವಾಮಿ),ಬೆಳಂದೂರು ನಾಗಭೂಷಣ(ಬಿ.ವಿ.ಸ್ವಾಮಿ),ಹೆಚ್.ಎಂ.ವರ್ತೇಶಗೌಡರು ಹುಗುಡಿ,ಜಂಬಳ್ಳಿ ಶಾಂತಕುಮಾರ,ಡಿ.ಎಸ್.ಕರುಣೇಶ್,ಎಂ.ಎಸ್.ಕಮಲಾಕ್ಷಮುಡುಬ,ಕೆ.ಆರ್.ರಾಜು,ಹಿಲ್ಕುಂಜಿ ನಂಜುಂಡಪ್ಪ,ಹೆಚ್.ಎಸ್.ದಿನೇಶ್‍ಹೊಳೆನಕೊಪ್ಪ,ತಳಗಿಬೈಲು ವೀರಣ್ಣ,ಕುಕ್ಕಳಲೆ ನಾಗಾರ್ಜುನ(ನಾಗೇಶ್),ಎಂ.ಕೆ.ಸದಾನಂದ,ಗುತ್ತಿಗೆದಾರ ದೀಪು,ಡಿ.ಈ.ಮಧುಸೂದನ್,ಜಂಬಳ್ಳಿಗಿರೀಶ್ ಇನ್ನಿತರರು ಹಾಜರಿದ್ದರು.