Malenadu Mitra
ರಾಜ್ಯ ಶಿವಮೊಗ್ಗ

ಎಸ್. ರುದ್ರೇಗೌಡರಿಗೆ ಸಚಿವ ಸ್ಥಾನ ನೀಡಿ

ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ್ ಮೊಮ್ಮಾಯಿ ನೇತೃತ್ವದ  ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಶಾಸಕ ಹಾಗೂ ಅಭಿವೃದ್ಧಿಯ ಬಗ್ಗೆ ಪರಿಕಲ್ಪನೆ ಹೊಂದಿರುವ ಎಸ್. ರುದ್ರೇಗೌಡರನ್ನು ಸಚಿವರನ್ನಾಗಿ ಮಾಡಬೇಕೆಂದು ಜಿಲ್ಲಾ ಕೈಗಾರಿಕಾ ಸಂಘ ಒತ್ತಾಯಿಸಿದೆ.
 ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ  ನೇತೃತ್ವದಲ್ಲಿ ಮಾಚೇನಹಳ್ಳಿಯಲ್ಲಿ ಮಾಚೇನಹಳ್ಳಿ ಇಂಡಸ್ಟ್ರಿ ಅಸೋಸಿಯೇಷನ್, ಶಿವಮೊಗ್ಗ ಜಿಲ್ಲಾ ಕೈಗಾರಿಕೊದ್ಯಮಿಗಳ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕೈಗಾರಿಕಾ ಸಂಘದ ಸಭೆಯಲ್ಲಿ ಒತ್ತಾಯಿಸಿದೆ.
ಅಧ್ಯಕ್ಷರಾದ ರಮೇಶ್ ಹೆಗ್ಡೆ ಮಾತನಾಡಿದ ಬಹುತೇಕ ಕೈಗಾರಿಕೋದ್ಯಮಿಗಳು ಯಾವುದೇ ಅಧಿಕಾರವಿಲ್ಲದೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಎಸ್. ರುದ್ರೇಗೌಡರು ಕೈಗೊಂಡಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಲಿದೆ. ಈ ಹಿನ್ನಲೆಯಲ್ಲಿ ಹಿರಿಯರಾದ ಹಾಗೂ ಅನುಭವಿ ಕೈಗಾರಿಕೋದ್ಯಮಿ ಹಾಗೂ ಶಾಸಕರಾಗಿರುವ ಇವರಿಗೆ ಸಚಿವಸ್ಥಾನವನ್ನು ನೀಡುವುದು ಸೂಕ್ತ ಎಂದು ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಸಾವಿರಾರೂ ಜನರಿಗೆ ಉದ್ಯೋಗವನ್ನು ನೀಡಿರುವ ಹಿರಿಮೆಯನ್ನು ಹೊಂದಿದ್ದಾರೆ. ಅಲ್ಲದೇ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ, ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಕೈಗಾರಿಕೋದ್ಯಮಿಯಾಗಿ, ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿರುವ ಇವರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಶಿವಮೊಗ್ಗ ನಗರದ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಸಲಹೆ – ಸೂಚನೆಗಳನ್ನು ಸರ್ಕಾರಕ್ಕೂ ಕೊಟ್ಟಿದ್ದಾರೆ ಎಂದರು.
. ಶ್ರೀನಾಥ್ ಗಿರಿಮಾಜಿ, ಐಐಎಫ್ ಉಪಾಧ್ಯಕ್ಷ ಮಧುಕರ್ ಜೋಯಿಸ್, ಫೌಂಡ್ರಿ ಕ್ಲಸ್ಟರ್‌ನ ಕಾರ್ಯದರ್ಶಿ ಬೆನಕಪ್ಪ, ಎಂಐಎ ಕಿರಣ್ ಕುಮಾರ್, ಶಾಂತಲಾ ಸ್ಪೇರೋ ಕಾಸ್ಟ್‌ನ ಡಿ.ಎಸ್. ಚಂದ್ರಶೇಖರ್, ಕೈಗಾರಿಕೋದ್ಯಮಿಗಳಾದ ಮಹೇಂದ್ರಪ್ಪ, ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

Ad Widget

Related posts

ಜನನಾಯಕನಿಗೆ ಆತ್ಮೀಯ ಅಭಿನಂದನೆ, ಕಾಗೋಡು ತಿಮ್ಮಪ್ಪರಿಗೆ ಶಿವಮೊಗ್ಗದಲ್ಲಿ ಹೃದಯ ಸ್ಪರ್ಶಿ ಸನ್ಮಾನ

Malenadu Mirror Desk

ಶರಾವತಿ ಸಂತ್ರಸ್ಥರ ಸಮಸ್ಯೆ ಕುರಿತ ಸಭೆ

Malenadu Mirror Desk

ರಿಲ್ಯಾಕ್ಸ್ ಮೂಡಲ್ಲಿ ಬಿಎಸ್‌ವೈ, ಹಾಲಪ್ಪ ಭೇಟಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.