ಶಿವಮೊಗ್ಗ, ಜು.೨೯: ಸಾಗರ ಶಾಸಕ ಹರತಾಳು ಹಾಲಪ್ಪ ಅವರಿಗೆ ಈ ಬಾರಿ ಸಚಿವ ಸ್ಥಾನ ಕೊಡಬೇಕೆಂದು ಶರಾವತಿ ಮುಳುಗಡೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಹೂವಪ್ಪ, ಹಾಲಪ್ಪ ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಾಗರ ಅಲ್ಲದೆ, ಸೊರಬ ಮತ್ತು ಹೊಸನಗರದ ಶಾಸಕರಾಗಿ ಕೆಲಸ ಮಾಡಿದ ಅನುಭವದ ಜೊತೆಗೆ ಹಿನ್ನೀರಿನ ಜನರ ಸಮಸ್ಯೆ ಪರಿಹಾರಕ್ಕೆ ಅವರ ಸತತ ಪ್ರಯತ್ನ ಮಾಡುತ್ತಿದ್ದಾರೆ. ಸ್ವತಃ ಅವರೂ ಇದೇ ಪ್ರದೇಶದವರಾದ ಕಾರಣ ಈ ಸಮಸ್ಯೆ ಬಗೆಹರಿಸಲು ಅವರು ಸಚಿವರಾಗುವುದು ಅವಶ್ಯ ಎಂದು ಹೇಳಿದರು.
ಎಲ್ಲಾ ಸಮಾಜದವರ ಜೊತೆ ಬೆರೆತು ಅಭಿವೃದ್ಧಿ ಮಾಡುತ್ತಿದ್ದಾರೆ. ಸಾಗರಕ್ಕೆ ವಿಶೇಷ ಅನುದಾನ ತರುವ ಮೂಲಕ ಸಾಕಷ್ಟು ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಈ ಹಿಂದೆ ಕಾಗೋಡು ತಿಮ್ಮಪ್ಪ ಸಹ ಇದೆ ರೀತಿ ಕೆಲಸ ಮಾಡಿದ್ದರು. ಅವರೂ ಸಹ ಮುಳುಗಡೆ ಸಂತ್ರಸ್ಥರ ಪರ ಹೋರಾಡಿ ದ್ದರು. ಸರಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಯಬೇಕಾದ್ದರಿಂದ ಹಾಲಪ್ಪ ಈಗ ಸಚಿವರಾಗಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ, ಮಹೇಶ್ ಮೊದಲಾದವರಿದ್ದರು.