ಶಿವಮೊಗ್ಗ,ಜು:೨೯: ಪರಿಸರ ಉಳಿಸಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ. ನಮ್ಮ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಗಿಡನೆಟ್ಟು ಪೋಷಿಸಬೇಕು ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಹೇಳಿದರು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಶಿವಮೊಗ್ಗ ಜಿಲ್ಲಾ ತಾಲೂಕು ಘಟಕದಿಂದ ಬುಧವಾರ ರವೀಂದ್ರನಗರ ಸರಕಾರಿ ಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಪರಿಸರದ ಕುರಿತ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಬೇಕೆಂದು ಹೇಳಿದರು.
ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಇಸಿಓ ಗುಡ್ಡಪ್ಪ ಗಾಣಿಗೇರ್, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾಧ್ಯಕ್ಷೆ ರಾಧಾ, ಪ್ರಧಾನ ಕಾರ್ಯದರ್ಶಿಪುಷ್ಪಾ, ಕೋಶಾಧ್ಯಕ್ಷೆ ಲಲಿತಾ, ತಾಲೂಕು ಘಟಕದ ಅಧ್ಯಕ್ಷಕ್ಷೆ ಶಾಹಿನಾಬಾನು ಕೋಶಾಧ್ಯಕ್ಷೆ ಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.
ನಮ್ಮ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಗಿಡನೆಟ್ಟು ಪೋಷಿಸಬೇಕು –ನಾಗರಾಜ್,ಕ್ಷೇತ್ರ ಶಿಕ್ಷಣಾಧಿಕಾರಿ