ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಕೆರೆಗೆ ಸರಕಾರಿ ಬಸ್ ಉರುಳಿಬಿದ್ದು ಯುವಕನೋರ್ವ ಸಾವಿಗೀಡಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಚಾಲಕ ಎದುರಿನಿಂದ ಬಂದ ಬೈಕಿಗೆ ಢಿಕ್ಕಿ ಆಗುವುದನ್ನು ತಪ್ಪಿಸಲು ಹೋದಾಗ ಬಸ್ ನೇರವಾಗಿ ಕೆರೆಗೆ ಉರುಳಿದೆ.
ಶಿವಮೊಗ್ಗದಿಂದ ಸಿಗಂದೂರಿಗೆ ಬೈಕಲ್ಲಿ ಹೊರಟಿದ್ದ ದೀಪಕ್ ಮತ್ತು ಶಬರೀಶ್ ಬೈಕ್ ಗೆ ಬಸ್ ಡಿಕ್ಕಿಯಾಗಿ ಕೆರೆಗೆ ಹಾರಿದೆ. ತೀವ್ರ ಗಾಯಗೊಂಡಿದ್ದ ದೀಪಕ್ ಅಸುನೀಗಿದ್ದು, ಶಬರೀಶ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ನಲ್ಲಿ 27 ಮಂದಿ ಪ್ರಯಾಣಿಕರಿದ್ದರು. ರಕ್ಷಣಾ ಕಾರ್ಯ ಮುಂದುವರಿದಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.