Malenadu Mitra
ರಾಜ್ಯ ಶಿವಮೊಗ್ಗ

ಈ-ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸವಾಲು: ಅಮರನಾರಾಯಣ

ಕುವೆಂಪು ವಿವಿ: ಪರಿಸರ ಮಾಲಿನ್ಯ ಕುರಿತ ವಿಶೇಷ ಉಪನ್ಯಾಸ 

ಪರಿಸರ ಮಾಲಿನ್ಯದ ನಿರ್ವಹಣೆಯಲ್ಲಿ ಸಾಂಪ್ರದಾಯಿಕ ಮಾದರಿಯನ್ನೇ ಈಗಲೂ ಅನುಸರಿಸಲಾಗುತ್ತಿದೆ. ನಮ್ಮ ಅರಿವಿಗೆ ಬಾರದ ರೀತಿಯಲ್ಲಿ ಈ-ತ್ಯಾಜ್ಯ ಈಗಾಗಲೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಮಾಲಿನ್ಯ ನಿರ್ವಹಣೆಯ ಕ್ರಿಯಾ ಯೋಜನೆಗಳನ್ನು ಅತ್ಯಂತ ತುರ್ತಾಗಿ ಪುನರ್‌ರೂಪಿಸುವ ಅಗತ್ಯತೆ ಇದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ವತಿಯಿಂದ ಮಂಗಳವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ “ಪರಿಸರ ಮಾಲಿನ್ಯ” ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಈ-ತ್ಯಾಜ್ಯದ ಬಹುಪಾಲು ಪ್ರಮಾಣವನ್ನು ಅಸಂಘಟಿತ ವಲಯ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಪರಿಸರಕ್ಕೆ ಮಾರಕವಾಗದ ಹಾಗೆ ಈ-ತ್ಯಾಜ್ಯವನ್ನು ನಿರ್ವಹಿಸುವುದರ ಜೊತೆಗೆ ಮನುಷ್ಯರ ಆರೋಗ್ಯದ ಹಿತದೃಷ್ಟಿಯ ಕಡೆಗೂ ಗಮನಹರಿಸುವ ಅವಶ್ಯಕತೆ ಇದೆ. ಸರ್ಕಾರದ ನೀತಿ ನಿರೂಪಕರು ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.

ಪರಿಸರದ ಸಮತೋಲನ ಮತ್ತು ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಎಲೆಕ್ಟಿçಕ್ ಕಾರುಗಳ ಬಳಕೆ, ಸೌರಶಕ್ತಿ, ಪವನಶಕ್ತಿಯಂತಹ ಅಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಯ ಕಡೆಗೆ ಹೆಚ್ಚಿನ ಗಮನಕೊಡಬೇಕಿದೆ. ಮಳೆನೀರು ಕೊಯಿಲು, ಹಸಿರೀಕರಣ ಮತ್ತಿತರ ಕಾರ್ಯಯೋಜನೆಗಳನ್ನು ಕೂಡ ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳ ಸಹಭಾಗಿತ್ವದಲ್ಲಿ ಮುಂದುವರೆಸಬೇಕಿದೆ ಎಂದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯ ಮಳೆನೀರು ಕೊಯಿಲು, ಸೌರಶಕ್ತಿಯ ಮೂಲಕ ಬೀದಿ ದೀಪಗಳು, ಕಸನಿರ್ವಹಣೆಯಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಈಗಾಗಲೇ ಅನುಸರಿಸುತ್ತಿದೆ. ಇಂಧನ ಉಳಿತಾಯ ಮತ್ತು ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕ್ಯಾಂಪಸ್ ಆವರಣದಲ್ಲಿ ಸೈಕಲ್‌ಗಳನ್ನು ಪರಿಚಯಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. 

ಪರಿಸರ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ. ಹೀನಾ ಕೌಸರ್, ಪ್ರೊ. ಎಸ್. ವಿ. ಕೃಷ್ಣಮೂರ್ತಿ, ಪ್ರೊ. ಜೆ. ನಾರಾಯಣ, ಡಾ. ಯೋಗೇಂದ್ರ. ಕೆ, ಡಾ. ಬಸವರಾಜಪ್ಪ, ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Ad Widget

Related posts

ನನ್ನ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಕಾರಣ ; ಹರತಾಳು ಹಾಲಪ್ಪ

Malenadu Mirror Desk

ನಿಜನಾಯಕ ಬಂಗಾರಪ್ಪ, ಅವರ ಸ್ಥಾನ ತುಂಬುವ ವ್ಯಕ್ತಿ ದಶಕ ಕಳೆದರೂ ಸಿಕ್ಕಿಲ್ಲ

Malenadu Mirror Desk

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ತನಿಖೆ ಶೀಘ್ರ : ಮಧುಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.