ನಾನು ಇಂತಹುದೇ ಖಾತೆ ಬೇಕೆನ್ನುವುದಿಲ್ಲ , ಆದರೆ ಕೊಟ್ಟ ಜವಾ ಬ್ದಾರಿಯನ್ನು ಸಮರ್ಥವಾಗಿ ನಿಭಾಯಿ ಸುತ್ತೇನೆ ಎಂದು ನೂತನ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಶಿವಮೊಗ್ಗ ನಗರಕ್ಕೆ ಬಂದ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಈ ಸಂದರ್ಭ ದೇವಾಲ ಯಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಈಶ್ವರಪ್ಪ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಆಗಲಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾ ಯಗಳಿದ್ದು, ಅವುಗಳನ್ನು ಪಕ್ಷದ ವರಿಷ್ಠರು ಬಗೆಹರಿಸಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಕನಸುಗಾರ
ಸರ್ಕಾರ ಬಿದ್ದು ಹೋಗುತ್ತದೆ. ನಾನು ಮತ್ತೆ ಸಿಎಂ ಆಗಬಹುದು ಎಂದು ಸಿದ್ದರಾ ಮಯ್ಯ ಕನಸು ಕಂಡಿದ್ದರು. ಆದರೆ ಅದು ಹುಸಿಯಾಗಿದೆ.ಈ ಸರ್ಕಾರ ತನ್ನ ಅವ ಪೂರ್ಣಗೊಳಿಸಲಿದೆ. ಮತ್ತೆ ಪೂರ್ಣ ಬಹುಮತದೊಂದಿಗೆ ಅಕಾರಕ್ಕೆ ಬರಲಿ ದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಇನ್ನೆಂದೂ ಅಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ ಎಂದು ಭವಿಷ್ಯ ನುಡಿದರು.
ಭವ್ಯ ಸ್ವಾಗತ
ಈಶ್ವರಪ್ಪ ಅವರು ಶಿವಮೊಗ್ಗ ನಗರಕ್ಕೆ ಬರುತ್ತಿದ್ದಂತೆ ಅದ್ದೂರಿಯಾಗಿ ಸ್ವಾಗತಿಸಲಾ ಯಿತು. ಬೆಂಗಳೂರಿನಿಂದ ಬಂದ ಅವರನ್ನು ಎಂ.ಆರ್.ಎಸ್ ಬಳಿ ಎದುರುಗೊಂಡ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾ ನಿಗಳು ಪಟಾಕಿ ಸಿಡಿಸಿ, ಹಾರ ಹಾಕಿ ತಮ್ಮ ನಾಯಕನನ್ನು ಬರಮಾಡಿಕೊಂಡರು.
ತುಸು ದೂರ ನಡೆದುಕೊಂಡೇ ಬಂದ ಈಶ್ವರಪ್ಪ ಅವರೊಂದಿಗೆ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಗನ್ನಿ ಶಂಕರ್, ಚೆನ್ನಬಸಪ್ಪ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ನಾಲ್ಕು ಹೆಜ್ಜೆ ಕಾಲ್ನೆಡಿಗೆಯಲ್ಲಿಯೇ ಬಂದ ಸಚಿವ ಈಶ್ವರಪ್ಪನವರಿಗೆ ಮೇಯರ್ ಸುನೀತ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಸೇರಿದಂತೆ ಪಾಲಿಕೆ ಸದಸ್ಯರು, ಅನೇಕ ಕಾರ್ಯಕರ್ತರು ಆಗಮಿಸಿ ಹೂಗುಚ್ಚನೀಡಿ ಸ್ವಾಗತಿಸಲಾಯಿತು.