Malenadu Mitra
ರಾಜ್ಯ ಶಿವಮೊಗ್ಗ

ನೆಟ್ವರ್ಕ್ ಸಮಸ್ಯೆ ಸಿಎಂಗೆ ಬೇಳೂರು ಮನವಿ

ಸಾಗರ ತಾಲೂಕು ಕರೂರು-ಬಾರಂಗಿ ಹೋಬಳಿಯಲ್ಲಿನ ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹರಿಸಬೇಕು ಮತ್ತು ಹಿನ್ನೀರ ಪ್ರದೇಶಕ್ಕೆ ಪೊಲೀಸ್ ಉಪಠಾಣೆ ಮಂಜೂರು ಮಾಡಬೇಕೆಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಬೇಳೂರು ಅವರು, ನೆಟ್ವರ್ಕ್ ಸಮಸ್ಯೆಯಿಂದ ತುಮರಿ ಭಾಗದ ಜನರಿಗೆ ತೀವ್ರ ತೊಂದರೆಯಾಗಿದೆ. ಆನ್‍ಲೈನ್ ಕ್ಲಾಸ್ ಕೇಳಲಾಗದೆ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಬೇಕು. ಇತ್ತಿಚಿಗೆ ಕರೂರು-ಬಾರಂಗಿ ಹೋಬಳಿಯಲ್ಲಿ ಅಪರಾಧ ಕೃತ್ಯಗಳು ವರದಿಯಾಗಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಉಪಠಾಣೆ ಮಂಜೂರು ಮಾಡಬೇಕೆಂದು ಕೆಪಿಸಿಸಿ ವಕ್ತಾರರೂ ಆದ ಗೋಪಾಲಕೃಷ್ಣ ಅವರು ಸಿಎಂಗೆ ಮನವಿ ಮಾಡಿದರು.
ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿಗಳು ತಮ್ಮ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗೆ ಪತ್ರ ಬರೆಯಲು ತಿಳಿಸಿದರು

Ad Widget

Related posts

ಮಲೆನಾಡಿನ ಕುತೂಹಲ ಇನ್ನೂ ಉಳಿದಿದೆ,ಬೀಳ್ಕೊಡುಗೆ ಸಮಾರಂಭದಲ್ಲಿ ವಾರ್ತಾಧಿಕಾರಿ ಶಫಿ ಹೇಳಿಕೆ

Malenadu Mirror Desk

ಭಾಷೆಗಳ ಬಗ್ಗೆ ಸೂಕ್ಷ್ಮ ಅಧ್ಯಯನ ಅಗತ್ಯ ಪ್ರೊ. ಮೇಟಿ ಅವರ ೪ಕೃತಿ ಬಿಡುಗಡೆಗೊಳಿಸಿ ನಾಟಕಕಾರ ಶಿವಪ್ರಕಾಶ್ ಹೇಳಿಕೆ

Malenadu Mirror Desk

ಮಳೆನಾಡ ವೈಭವ, ಜೋಗಕ್ಕೆ ಬಂದ ಸಿರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.