Malenadu Mitra
ರಾಜ್ಯ ಶಿವಮೊಗ್ಗ

ಸಮಾಜಕ್ಕೆ ಕಷ್ಟ ಬಂದಾಗ ಸ್ಪಂದಿಸಬೇಕು: ಎಂ.ಬಿ.ಭಾನುಪ್ರಕಾಶ್

ಸಮಾಜಕ್ಕೆ ಕಷ್ಟ ಬಂದಾಗ ಸ್ಪಂದಿಸಬೇಕು ಎಂಬ ಸಂವೇದನೆ ಬಿಜೆಪಿ ಮತ್ತು ಆರ್.ಎಸ್.ಎಸ್.ನ ಗುರಿಯಾಗಿದೆ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹೇಳಿದರು.
ಶನಿವಾರ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ವೈದ್ಯಕೀಯ ಪ್ರಕೋಷ್ಟದಿಂದ ಆಯೋಜಿಸಲಾಗಿದ್ದ ಆರೋಗ್ಯ ಸ್ವಯಂ ಸೇವಕರ ಅಭುಯಾನಕ್ಕೆ ಚಾಲನೆ ನೀಡಿದ ಅವರು, ಜನಸಂಘ ಬಿಜೆಪಿಯಾಗಿ ಬದಲಾವಣೆಗೊಂಡಿದೆ. ಆರ್.ಎಸ್.ಎಸ್.ನ ಮೂಲ ಉದ್ದೇಶಗಳನ್ನು ಇಟ್ಟುಕೊಂಡೇ ಮುನ್ನಡೆಯುತ್ತಿದೆ. ಸಮಾಜ ಸೇವೆಯೇ ನಮ್ಮ ಗುರಿಯಾಗಿದೆ. ದೇಶ ಭಕ್ತಿ, ಸಂಸ್ಕಾರವನ್ನು ನಾವು ಕಲಿತಿದ್ದೇವೆ ಎಂದರು.
ಆರ್.ಎಸ್.ಎಸ್. ಆಗಲಿ, ಸಂಘಪರಿವರವಾಗಲಿ ಎಲ್ಲವನ್ನೂ ನಮಗೆ ಕಲಿಸಿಲ್ಲ. ಆದರೆ, ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವ ಸಹಜವಾದ ಕರ್ತವ್ಯವನ್ನು ನಿರ್ವಹಿಸುವುದನ್ನು ಹೇಳಿಕೊಟ್ಟಿದೆ.  ಕೋವಿಡ್ ಕಾರಣಕ್ಕೆ ತಂದೆ-ತಾಯಿ, ಮಕ್ಕಳು ಆಸ್ಪತ್ರೆಗೆ ದಾಖಲಾದಾಗ ಯಾರೂ ನೋಡಲು ಬಾರದ ಸ್ಥಿತಿಯಲ್ಲಿ ಸ್ವಯಂ ಸೇವಕರು ನೆರವು ನೀಡಿದ್ದಾರೆ ಎಂದರು.


ಈಗ ಇದರ ಮುಂದುವರಿದ ಭಾಗವಾಗಿ ಆರೋಗ್ಯ ಸ್ವಯಂ ಸೇವಕರ ತಂಡವನ್ನು ಸಿದ್ಧಪಡಿಸಲಾಗುತ್ತಿದೆ. ಕೋವಿಡ್ ಮೊದಲನೇ ಅಲೆ ಬಂದಾಗ ದೇಶದಲ್ಲಿ ಯಾವ ಸಿದ್ಧತೆಗಳೂ ಇರಲಿಲ್ಲ. ಎರಡನೇ ಅಲೆ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ದರಿಂದ ಹೆಚ್ಚು ಸಾವು-ನೋವು ಸಂಭವಿಸಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರತಿ ಬೂತ್ನಲ್ಲಿ ಆರೋಗ್ಯ ಸ್ವಯಂ ಸೇವಕರ ತಂಡ ರಚನೆಗೆ ಸೂಚನೆ ನೀಡಿದ್ದಾರೆ ಎಂದರು.


ಕೋವಿಡ್ ತಡೆಯುವ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾದ ಹಾಸಿಗೆ, ಆಮ್ಲಜನಕ, ವೈದ್ಯಕೀಯ ಪರಿಕರಗಳಂತಹ ಮೂಲ ಸೌಕರ್ಯವನ್ನು ಬೇರೆ ಕಡೆಯಿಂದ ಖರೀದಿಸಿ ತಂದಾದರೂ ನೀಡಬಹುದು. ಆದರೆ ಆರೋಗ್ಯ ಸ್ವಯಂ ಸೇವಕರನ್ನು ತಕ್ಷಣಕ್ಕೆ ಸಿದ್ಧಗೊಳಿಸಲು ಆಗುವುದಿಲ್ಲ. ಹಾಗಾಗಿ ಈಗಿನಿಂದಲೇ ನಿಯೋಜಿಸುವ ಕೆಲಸ ಆರಂಭವಾಗಿದೆ. ಪ್ರತಿ ಬೂತ್ನಲ್ಲಿ ಮೂವರು ಆರೋಗ್ಯ ಸ್ವಯಂ ಸೇವಕರ ತಂಡ ಕಾರ್ಯನಿರ್ವಹಿಸಲಿದೆ. ಬೂತ್ ವ್ಯಾಪ್ತಿಯಲ್ಲಿ ಯಾರಿಗೇ ಆರೋಗ್ಯ ಸಮಸ್ಯೆ ಎದುರಾದರೂ ಅವರಿಗೆ ಬೇಕಾದ ಅಗತ್ಯ ನೆರವನ್ನು ಈ ತಂಡ ನೀಡಲಿದೆ. ಇದು ಆಶಾ ಕಾರ್ಯಕರ್ತೆ, ಸ್ಥಳೀಯ ವೈದ್ಯರಿಗೆ ಪರ್ಯಾಯ ಅಲ್ಲ. ಬದಲಾಗಿ ಪೂರಕವಾಗಿ ಕೆಲಸ ಮಾಡಲಿದ್ದಾರೆ ಎಂದರು.


ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಆರ್‌ಎಸ್‌ಎಸ್ ವಿಭಾಗ ಸಹ ಕಾರ್ಯವಾಹ ಗಿರೀಶ್ ಕಾರಂತ್, ಡಾ.ಹೇಮಂತಕುಮಾರ್, ಡಾ.ಮರುಳಾರಾಧ್ಯ, ಸುರೇಖಾ, ರಶ್ಮಿ ಶ್ರೀನಿವಾಸ್ ಉಪಸ್ಥಿತರಿದ್ದರು. ವೈದ್ಯಕೀಯ ಪ್ರಕೋಷ್ಟ ಸಹ ಸಂಯೋಜಕ ಡಾ.ಶ್ರೀನಿವಾಸ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.

Ad Widget

Related posts

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ

Malenadu Mirror Desk

ನ್ಯಾಷನಲ್ ಹೈಸ್ಕೂಲ್ ಆಧುನಿಕರಣ

Malenadu Mirror Desk

ಹರ್ಷ ಕೊಲೆ: ಮತ್ತಿಬ್ಬರ ಬಂಧನ, ನಾಪತ್ತೆಯಾದ ಹರ್ಷನ ಮೊಬೈಲ್‌ನಲ್ಲಿದೆಯೇ ಕೊಲೆ ರಹಸ್ಯ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.