ಸೊರಬ ತಾಲೂಕಿನ ಕೊಡಕಣಿ ಗ್ರಾಮದ ಅಳಿಯ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರು ಸಚಿವರಾದ ನಿಮಿತ್ತ ಅವರ ಜನ್ಮ ದಿನದಂದು ಕೊಡಕಣಿ ಗ್ರಾಮಸ್ಥರು ಕಾರ್ಕಳದ ಅವರ ನಿವಾಸದಲ್ಲಿ ಭಾನುವಾರ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಂದನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಕೊಡಕಣಿ ಗ್ರಾಮಸ್ಥರಿಂದ ಜನ್ಮ ದಿನದಂದು ಗೌರವ ಸ್ವೀಕರಿಸಿದ್ದು ಸಂತಸ ನೀಡಿದ್ದು, ಶೀಘ್ರದಲ್ಲೇ ಕೊಡಕಣಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ಕೊಡಕಣಿ ಗ್ರಾಮ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ್ ಯಂಕೇನ್ ಮಾತನಾಡಿ, ಕೊಡಕಣಿ ಗ್ರಾಮದ ಅಳಿಯರಾದ ಸುನಿಲ್ ಕುಮಾರ್ ಅವರು ಸಮಾಜಮುಖಿ ಚಿಂತನೆ ಹಾಗೂ ರಾಜಕೀಯವಾಗಿ ಬೆಳವಣಿಗೆ ಹೊಂದಿದ್ದಲ್ಲದೆ ಸಚಿವರಾಗಿ ಆಯ್ಕೆಯಾಗಿರುವುದು ಸಂತಸ ನೀಡಿದೆ. ಸೊರಬ ಪುರಸಭೆ ವ್ಯಾಪ್ತಿಗೆ ಸೇರಿದ ಕೊಡಕಣಿ ಗ್ರಾಮ 600 ಮನೆಗಳು ಹಾಗೂ ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದ್ದು ಅಭಿವೃದ್ಧಿಯಿಂದ ಹಿಂದುಳಿದಿದೆ. ಸಚಿವರು ಕೊಡಕಣಿ ಗ್ರಾಮ ಸೇರಿದಂತೆ ತಾಲೂಕು ಅಭಿವೃದ್ಧಿಗೆ ಒತ್ತು ನೀಡಲು ವಿನಂತಿಸಿದರು.
ಗ್ರಾಮಸ್ಥರಾದ ಕೆ.ಜಿ.ಬಸವರಾಜ್, ದಾನಪ್ಪ, ವೈ.ಡಿ.ನಾಗರಾಜ್, ರವಿ ಕುಮಾರ್ ಯಂಕೇನ್, ಮೇಘರಾಜ್, ಷಡಾಕ್ಷರಿ, ಶಾಂತಪ್ಪ ಇತರರಿದ್ದರು.
previous post